ಮುಂಬೈ : ಭಾರತದಲ್ಲಿ ಇದೇ ಮೊದಲ ಬಾರಿಗೆ ಬ್ಲಾಕ್‍ಚೈನ್ ಮದುವೆಯನ್ನು ಪುಣೆಯ ಮೂಲದ ದಂಪತಿ ಮಾಡಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ತಮಿಳು ದಂಪತಿ ಮೆಟಾವರ್ಸ್ನಲ್ಲಿ ವಿವಾಹವಾಗಿದ್ದು, ಇವರಿಬ್ಬರು ಮಹಾರಾಷ್ಟ್ರ ಮೂಲದ ದಂಪತಿ. ಇವರು ಓಪನ್ಸೀ ಪ್ಲಾಟ್ಫಾರ್ಮ್ನಿಂದ ಬ್ಲಾಕ್‍ಚೈನ್ ತಂತ್ರಜ್ಞಾನದ ಮೂಲಕ ಮದುವೆಯಾಗಿದ್ದಾರೆ. ಇದರಲ್ಲಿ ಕುತೂಹಲಕಾರಿಯಾಗಿದ ವಿಷಯವೆಂದರೆ ಇದು ಭಾರತದ ಮೊದಲ ಬ್ಲಾಕ್‍ಚೈನ್ ಮದುವೆಯಾಗಿದೆ.
ಲಿಂಕ್ಡ್ಇನ್ ಪೋಸ್ಟ್ ನ ಪ್ರಕಾರ, ಕಳೆದ ವರ್ಷ ನವೆಂಬರ್ನಲ್ಲಿ ಶ್ರುತಿ ನಾಯರ್ ಮತ್ತು ಅನಿಲ್ ನರಸಿಪುರಂ ಕಾನೂನುಬದ್ಧವಾಗಿ ಮದುವೆಯಾಗಿದ್ದರು. ನಂತರ ಬ್ಲಾಕ್‍ಚೈನ್ ಮದುವೆ ಮೂಲಕ ತಮ್ಮ ಸಂಬಂಧವನ್ನು ಇನ್ನೂ ಗಟ್ಟಿಪಡಿಸಿಕೊಂಡಿದ್ದಾರೆ.
ದಂಪತಿ Ethereum ಸ್ಮಾರ್ಟ್ ಒಪ್ಪಂದದ ಮೂಲಕ ಮದುವೆಯನ್ನು ಮಾಡಿಕೊಂಡಿದ್ದಾರೆ. ಅನಿಲ್ ನರಸಿಪುರಂ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದು, 2021ರ ನವೆಂಬರ್ 15 ರಂದು ಶ್ರುತಿ ನಾಯರ್ ಮತ್ತು ನಾನು ಮದುವೆಯಾದೆವು! ನಮ್ಮ ಮದುವೆ ಕೋವಿಡ್ ಸಮಯದಲ್ಲಿ ಆಗಿತ್ತು.
ಅದಕ್ಕೆ ನಮ್ಮ ಮದುವೆಯನ್ನು ಅದ್ದೂರಿಯಾಗಿ ಮಾಡುವ ಬದಲು ಮದುವೆಯನ್ನು ಕಾನೂನಿನ ಪ್ರಕಾರ ನೋಂದಾಯಿಸಿಕೊಳ್ಳಲಾಯಿತು. ಬ್ಲಾಕ್‍ಚೈನ್ ತಂತ್ರಜ್ಞಾನವನ್ನು ಬಳಸಿಕೊಂಡು ನಮ್ಮ ಸಂಬಂಧವನ್ನು ಗಟ್ಟಿಗೊಳಿಸಲು ನಾವು ನಿರ್ಧರಿಸಿದ್ದೆವು ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.