Select Your Language

Notifications

webdunia
webdunia
webdunia
webdunia

ಭಾರತವನ್ನು ಆಳಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

ಭಾರತವನ್ನು ಆಳಲು ಸಾಧ್ಯವಿಲ್ಲ: ರಾಹುಲ್ ಗಾಂಧಿ
ನವದೆಹಲಿ , ಗುರುವಾರ, 3 ಫೆಬ್ರವರಿ 2022 (11:02 IST)
ನವದೆಹಲಿ : ಭಾರತವು ರಾಜ್ಯಗಳ ಒಕ್ಕೂಟವಾಗಿದೆ. ಅದನ್ನು ಸಾಮ್ರಾಜ್ಯ ಅಂತ ಆಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಾರತವನ್ನು ಸಂವಿಧಾನದಲ್ಲಿ ರಾಜ್ಯಗಳ ಒಕ್ಕೂಟ ಎಂದು ವಿವರಿಸಲಾಗಿದೆ. ಆದರೆ ರಾಷ್ಟ್ರವಾಗಿ ಅಲ್ಲ. ಭಾರತದಲ್ಲಿ ಒಂದು ರಾಜ್ಯದ ಜನರನ್ನು ಆಳಲು ಸಾಧ್ಯವಿಲ್ಲ.

ವಿವಿಧ ಭಾಷೆಗಳು ಮತ್ತು ಸಂಸ್ಕೃತಿಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಇದು ಪಾಲುದಾರಿಕೆ, ಆದರೆ ಸಾಮ್ರಾಜ್ಯವಲ್ಲ ಎಂದು ಹೇಳಿದ್ದಾರೆ. 

 
ಸಹಕಾರಿ ಫೆಡರಲಿಸಂ, ಸಂಭಾಷಣೆ ಮತ್ತು ಸಂಧಾನದ ಪ್ರಾಮುಖ್ಯತೆ ದಶಕಗಳಿಂದ ಭಾರತವನ್ನು ಆಳಿದ ಏಕೈಕ ಮಾರ್ಗವಾಗಿದೆ ಎಂದು ತಿಳಿಸಿದ್ದಾರೆ. 

ಬುಧವಾರ ಅವರು ಸಂಸತ್ತಿನಲ್ಲಿ ಈ ಗಂಭೀರ ಆರೋಪ ಮಾಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಕ್ಷಮೆಯಾಚಿಸಬೇಕು. ಆದರೆ ಮನೆಯೊಳಗಡೆ ಗೃಹ ಸಚಿವರು ಚಪ್ಪಲಿ ಧರಿಸಿದ್ದನ್ನು ಕಂಡಿದ್ದೆವು ಎಂದು ರಾಜಕಾರಣಿಗಳು ದೂರಿದ್ದಾರೆ ಎಂದು ತಿಳಿಸಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಮೇಲೆ ಅತ್ಯಾಚಾರ ನಡೆಸುತ್ತಿದ್ದ ತಂದೆಯನ್ನು ಪೊಲೀಸರಿಗೆ ಹಿಡಿದುಕೊಟ್ಟ ದೊಡ್ಡಮ್ಮ