Publish Date: Wed, 02 Feb 2022 (10:20 IST)
Updated Date: Wed, 02 Feb 2022 (10:23 IST)
ಆಂಟಿಗಾ: ಅಂಡರ್ 19 ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂದು ಭಾರತಕ್ಕೆ ಸೆಮಿಫೈನಲ್ ಪಂದ್ಯದಲ್ಲಿ ಪ್ರಬಲ ಎದುರಾಳಿ ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಅಧಿಕಾರಯುತವಾಗಿ ಗೆದ್ದ ಭಾರತೀಯರಿಗೆ ಇಂದು ಆಸ್ಟ್ರೇಲಿಯಾ ಎದುರಾಳಿಯಾಗಿದೆ. ಕೂಟದುದ್ದಕ್ಕೂ ಕೊರೋನಾ ಭೀತಿಯ ನಡುವೆಯೂ ಅದ್ಭುತ ಪ್ರದರ್ಶನ ನೀಡಿರುವ ಭಾರತ ಒಂದೆಡೆಯಾದರೆ ಪ್ರಬಲ ಆಸ್ಟ್ರೇಲಿಯಾ ಇನ್ನೊಂದೆಡೆ. ಹೀಗಾಗಿ ಈ ಪಂದ್ಯಕ್ಕೆ ಫೈನಲ್ ಕಳೆ ಬಂದಿದೆ.
ಕೊರೋನಾ ಸೋಂಕಿನಿಂದ ಬಳಲಿದ್ದ ಭಾರತೀಯ ಕ್ರಿಕೆಟಿಗರು ಚೇತರಿಸಿಕೊಂಡಿದ್ದು, ಈ ಪಂದ್ಯದಲ್ಲಿ ಪೂರ್ಣ ಸಾಮರ್ಥ್ಯದ ತಂಡ ಕಣಕ್ಕಿಳಿಯಲಿದೆ. ಭಾರತ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ನಲ್ಲೂ ವೈವಿದ್ಯಮಯ ಆಯ್ಕೆ ಹೊಂದಿದೆ. ಹೀಗಾಗಿ ಆಸ್ಟ್ರೇಲಿಯಾಕ್ಕೆ ಕಠಿಣ ಸವಾಲೊಡ್ಡುವುದು ಖಚಿತ. ಹಾಗಿದ್ದರೂ ಆಸ್ಟ್ರೇಲಿಯಾ ವಿರುದ್ಧ ತಮ್ಮೆಲ್ಲಾ ಸಾಮರ್ಥ್ಯದ ಧಾರೆಯೆರೆದು ಆಡುವುದು ಅಗತ್ಯ.