ನವದೆಹಲಿ : ಕಳೆದ 5 ವರ್ಷಗಳಲ್ಲಿ ಭಾರತೀಯ ಪೌರತ್ವವನ್ನು ಪಡೆದಿರುವ ಶೇ.87 ರಷ್ಟು ಅರ್ಜಿದಾರರು ಪಾಕಿಸ್ತಾನದಿಂದ ಬಂದವರು ಎಂಬ ಮಾಹಿತಿಯನ್ನು ಗೃಹ ಸಚಿವಾಲಯವು ಬಹಿರಂಗಪಡಿಸಿದೆ.
ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿ, ಕಳೆದ 5 ವರ್ಷಗಳಲ್ಲಿ 5,220 ವಿದೇಶಿಯರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಅವರಲ್ಲಿ 4,552 (ಶೇ.87) ಹೊಸ ನಾಗರಿಕರು ಪಾಕಿಸ್ತಾನದಿಂದ ಬಂದಿದ್ದಾರೆ ಎಂದು ಮಾಹಿತಿ ನೀಡಿದೆ.
ಕಳೆದ ವರ್ಷ ನವಂಬರ್ನಲ್ಲಿ ಲೋಕಸಭೆಗೆ ಮಾಹಿತಿ ನೀಡಿದ್ದ ಕೇಂದ್ರ ಗೃಹಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಪ್ರಕಾರ, 5 ವರ್ಷಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವ ತ್ಯಜಿಸಿದ್ದಾರೆ. 2021 ರಿಂದ 2021ರ ವರೆಗೆ 6,08,162 ಜನರು ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಅವರು ಲೋಕಸಭೆಗೆ ತಿಳಿಸಿದ್ದರು.
ಗೃಹ ಸಚಿವಾಲಯವು 2017 ಮತ್ತು 2022ರ ನಡುವೆ 5,220 ವಿದೇಶಿಯರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಪ್ರತಿವರ್ಷ ಸರಾಸರಿ 1,21,632 ಜನರು ಭಾರತೀಯ ಪೌರತ್ವವನ್ನು ತ್ಯಜಿಸಿದರು ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
• 2017- 1,33,049
• 2018- 1,34,561
• 2019- 1,44,017
• 2020- 85,248
• 2021- 1,11,287