ಕೀವ್ : ಪಾಕಿಸ್ತಾನದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬ ಹಾಗೂ ಕೀವ್ ಪೋಸ್ಟ್ ಪತ್ರಿಕೆಯ ಮಾಜಿ ಮಾಲೀಕ ಮೊಹಮ್ಮದ್ ಜಹೂರ್ ಉಕ್ರೇನ್ ಮೇಲೆ ರಷ್ಯಾ ದಾಳಿಯ ಹಿನ್ನೆಲೆ ಉಕ್ರೇನ್ಗೆ ಸಹಾಯ ಮಾಡಲು ಫೈಟರ್ ಜೆಟ್ಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ.
ಜಹೂರ್ ಪತ್ನಿ ಉಕ್ರೇನ್ನ ಗಾಯಕಿ ಕಮಲಿಯಾ ಜಹೂರ್, ತಮ್ಮ ಪತಿ ಹಾಗೂ ಇತರ ಶ್ರೀಮಂತ ಸ್ನೇಹಿತರು ಯುದ್ಧದಲ್ಲಿ ಉಕ್ರೇನ್ಗೆ ಸದ್ದಿಲ್ಲದೇ ಸಹಾಯ ಮಾಡಿದ್ದಾರೆ. ಉಕ್ರೇನ್ನ ವಾಯುಪಡೆಗೆ 2 ಜೆಟ್ಗಳನ್ನು ಖರೀದಿಸಲು ತನ್ನ ಪತಿ ಸಹಾಯ ಮಾಡಿರುವುದಾಗಿ ತಿಳಿಸಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಉಕ್ರೇನ್ನಲ್ಲಿ ವಾಸವಿದ್ದ ಹಾಗೂ ಉಕ್ರೇನಿಯನ್ ಪತ್ರಿಕೆ ಕೀವ್ ಪೋಸ್ಟ್ನ ಮಾಜಿ ಮಾಲೀಕರಾಗಿದ್ದ ಜಹೂರ್, ಉಕ್ರೇನ್ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಲ್ಲಿ ಕೆಲಸ ಮಾಡಿದ್ದಾರೆ.
ಜಹೂರ್ ಉಕ್ರೇನಿಯನ್ನರಿಗೆ ಸುರಕ್ಷಿತ ಮಾರ್ಗಗಳನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರದ ಮುಖ್ಯಸ್ಥರು ಹಾಗೂ ಇತರ ಪ್ರಭಾವಿ ವ್ಯಕ್ತಿಗಳನ್ನು ಇಂದಿಗೂ ಭೇಟಿಯಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.