ಇಸ್ಲಾಮಾಬಾದ್ : ಪಾಕಿಸ್ತಾನವು ಭಯೋತ್ಪಾದನೆಯ ಬೆದರಿಕೆಯನ್ನು ತೊಡೆದುಹಾಕಲು ಮತ್ತು ದೇಶದಲ್ಲಿ ಸಂಪೂರ್ಣ ಶಾಂತಿಯನ್ನು ತರಲು ಶುಕ್ರವಾರ ಪ್ರತಿಜ್ಞೆ ಮಾಡಿದೆ ಎಂದು ವಿದೇಶಾಂಗ ಕಚೇರಿ(ಎಫ್ಒ) ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಎಫ್ಒ ವಕ್ತಾರ ಆಸಿಫ್ ಇಫ್ತಿಕರ್, ಇಡೀ ಪ್ರದೇಶಕ್ಕೆ ಭಯೋತ್ಪಾದನೆ ಸಾಮಾನ್ಯ ಬೆದರಿಕೆಯಾಗಿದೆ.
ಭಯೋತ್ಪಾದನೆಯ ವಿರುದ್ಧ ಹೋರಾಡುವ ನಮ್ಮ ಸಂಕಲ್ಪವು ಅಚಲವಾಗಿದೆ ಎಂದು ನಾನು ಹೇಳಬಲ್ಲೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಯೋತ್ಪಾದನೆಯ ಪಿಡುಗನ್ನು ನಿಲ್ಲಿಸಲು, ಈ ಪ್ರದೇಶದಲ್ಲಿ ಮತ್ತು ನಮ್ಮ ದೇಶದಲ್ಲಿ ಶಾಂತಿ, ಸ್ಥಿರತೆಯನ್ನು ಸಾಧಿಸಲು ನಾವು ಎಲ್ಲ ಮಾರ್ಗಗಳನ್ನು ಅನುಸರಿಸುತ್ತೇವೆ.