Daily Horoscope

Select Your Language

Notifications

webdunia
webdunia
webdunia
webdunia

Gen Z ಗಾಗಿ ಅಂಚೆ ಇಲಾಖೆಯಿಂದ ಹೊಸ ಪ್ಲ್ಯಾನ್: ಇಲ್ಲಿದೆ ಡೀಟೈಲ್ಸ್

India post
Photo Credit: X
ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಅಂಚೆ ಇಲಾಖೆ ಜನಪ್ರಿಯತೆ ಕಳೆದುಕೊಳ್ಳುತ್ತಿದೆ. ಇದಕ್ಕೆ ಕಾರಣ ಹೊಸ ತಲೆಮಾರಿನ ಜನ ಅಂಚೆ ಇಲಾಖೆಯ ವ್ಯವಸ್ಥೆ ಬಳಸಿಕೊಳ್ಳದೇ ಇರುವುದು. 2012 ರ ನಂತರ ಜನಿಸಿದ Gen Z ತಲೆಮಾರಿನ ಜನರನ್ನು ಸೆಳೆಯುವ ಸಲುವಾಗಿ ಅಂಚೆ ಇಲಾಖೆ ಹೊಸ ಯೋಜನೆ ಜಾರಿಗೆ ತಂದಿದೆ.

ಅಂಚೆ ಇಲಾಖೆಯನ್ನು ಉಳಿಸಲು ಮತ್ತು ಇನ್ನಷ್ಟು ಜನಪ್ರಿಯಗೊಳಿಸಲು ಇಂಡಿಯಾ ಪೋಸ್ಟ್ ಎರಡು ಆಧುನಿಕ ಸೌಲಭ್ಯಗಳುಳ್ಳ ಅಂಚೆ ಕಚೇರಿಗಳನ್ನು ಸ್ಥಾಪಿಸಿದೆ. ಸದ್ಯಕ್ಕೆ ಕೇರಳದ ಕೊಟ್ಟಾಯಂ ಮತ್ತು ಆಂಧ್ರದ ವಿಶಾಖಪಟ್ಟಣಂನಲ್ಲಿ ಎರಡು ಕೇಂದ್ರ ಸ್ಥಾಪನೆಯಾಗಿದೆ.

ಈ ಕೇಂದ್ರದಲ್ಲಿ ಆಧುನಿಕ ತಂತ್ರಜ್ಞಾನಗಳ ವ್ಯವಸ್ಥೆ, ಕ್ಯೂ ಆರ್ ಆಧಾರಿತ ಮೈ ಸ್ಟಾಂಪ್ ಮುದ್ರಾಂಕ, ಹೊಸ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಜೊತೆಗೆ ವಿಶ್ರಾಂತಿ ಕೊಠಡಿ ಸೇರಿದಂತೆ ಯುವ ಜನರನ್ನು ಸೆಳೆಯುವ ರೀತಿಯಲ್ಲಿ ಅಂಚೆ ಕಚೇರಿ ಸ್ಥಾಪಿಸಲಾಗಿದೆ. ಈ ಅಂಚೆ ಕಚೇರಿಗಳು ಜನಪ್ರಿಯವಾದರೆ ಮುಂದೆ ದೇಶದ ನಾನಾ ಭಾಗಗಳಲ್ಲಿ ಇಂತಹದ್ದೇ ಅಂಚೆ ಕಚೇರಿಗಳು ಸ್ಥಾಪನೆಯಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಗಮನಿಸಿ: MGNREGA ಯೋಜನೆಗೆ ದೊಡ್ಡ ಬದಲಾವಣೆ ತಂದ ಕೇಂದ್ರ ಸರ್ಕಾರ, ಕಾರ್ಮಿಕರಿಗೆ ಗುಡ್ ನ್ಯೂಸ್