Select Your Language

Notifications

webdunia
webdunia
webdunia
webdunia

ತಮಿಳುನಾಡು, ತಂದೆ ಮಗನ ಜಗಳವನ್ನು ಬಿಡಿಸಲು ಹೋಗಿ ಪ್ರಾಣ ಕಳೆದುಕೊಂಡ ಸಬ್‌ ಇನ್‌ಸ್ಪೆಕ್ಟರ್‌

ತಮಿಳುನಾಡು ತಂದೆ ಮಗನ ಜಗಳ

Sampriya

ತಿರುಪ್ಪುರ , ಬುಧವಾರ, 6 ಆಗಸ್ಟ್ 2025 (15:34 IST)
ತಿರುಪ್ಪುರ: ತಂದೆ ಹಾಗೂ ಮಗನ ನಡುವೆ ನಡೆಯುತ್ತಿದ್ದ ಜಗಳವನ್ನು ಬಿಡಿಸಲು ಹೋಗಿ ವಿಶೇಷ ಸಬ್‌ ಇನ್‌ಸ್ಪೆಕ್ಟರ್‌ ಒಬ್ಬರು ಜೀವ  ಕಳೆದುಕೊಂಡಿರುವ ಘಟನೆ ತಮಿಳುನಾಡಿನ ಗುಡಿಮಂಗಲಮ್ ಜಿಲ್ಲೆಯಲ್ಲಿ ನಡೆದಿದೆ. 

ಮೃತ ಪೊಲೀಸ್‌ ಅಧಿಕಾರಿಯನ್ನು ಎಂ. ಷಣ್ಮುಗವೇಲು (57) ಎಂದು ಗುರುತಿಸಲಾಗಿದೆ.

ಇವರು ತಿರುಪ್ಪುರ ಜಿಲ್ಲೆಯ ಗುಡಿಮಂಗಲಮ್‌ ಠಾಣೆಯಲ್ಲಿ ವಿಶೇಷ ಸಬ್‌ ಇನ್‌ಸ್ಪೆಕ್ಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 

ಆ. 5ರಂದು ಷಣ್ಮುಗವೇಲು ಮತ್ತು ಸಶಸ್ತ್ರ ಪೊಲೀಸ್‌ ದಳದ ಕಾನ್‌ಸ್ಟೆಬಲ್‌ ಅಳಗುರಾಜ ಅವರು ಮಂಗಳವಾರ ರಾತ್ರಿ ಗಸ್ತು ತಿರುಗುತ್ತಿದ್ದರು. ಈ ಸಂದರ್ಭದಲ್ಲಿ ಮದ್ಯ ಸೇವಿಸಿದ್ದ ಇಬ್ಬರು ವ್ಯಕ್ತಿಗಳ ನಡುವೆ ಜಗಳ ನಡೆಯುತ್ತಿತ್ತು.

ತಂದೆ ಹಾಗೂ ಮಗನ ಈ ಜಗಳ ಬಿಡಿಸಲು ಷಣ್ಮುಗವೇಲು ಮತ್ತು ಅಳಗುರಾಜ ಮುಂದಾದರು. ಈ ಸಂದರ್ಭದಲ್ಲಿ ಜಗಳ ಆಡುತ್ತಿದ್ದವರಲ್ಲಿ ವ್ಯಕ್ತಿಯೊಬ್ಬ ಕುಡುಗೋಲಿನಿಂದ ಇವರ ಮೇಲೆ ಹಲ್ಲೆ ನಡೆಸಿದ್ದಾನೆ. ಷಣ್ಮುಗವೇಲು ಮೃತಪಟ್ಟಿದ್ದಾರೆ. 

ಘಟನೆಯಲ್ಲಿ ಕಾನ್‌ಸ್ಟೆಬಲ್‌ ದಾಳಿಯಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಆರ್ ಎಸ್ ಡ್ಯಾಮ್ ಕಟ್ಟುವ ಯೋಜನೆ ಟಿಪ್ಪುಗಿತ್ತು ಎಂದ ಜಮೀರ್ ಅಹ್ಮದ್ ಗೆ ಟಾಂಗ್ ಕೊಟ್ಟ ಬಿಜೆಪಿ