ಥಾಣೆ: ನವಿ ಮುಂಬೈನ ಪ್ರಮುಖ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ನಂತರ ಐವರು ರೋಗಿಗಳು ಗಂಭೀರ ಕಣ್ಣಿನ ಸೋಂಕಿನಿಂದ ಬಳಲುತ್ತಿದ್ದಾರೆ.
ಇದೀಗ ಪರವಾನಗಿ ಇಲ್ಲದೆ ಶಸ್ತ್ರಚಿಕಿತ್ಸೆ ನಡೆಸಿದ ಇಬ್ಬರು ನೇತ್ರ ತಜ್ಞರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಮಹಾರಾಷ್ಟ್ರದ ನವಿ ಮುಂಬೈ ಟೌನ್‌ಶಿಪ್‌ನಲ್ಲಿರುವ ವಾಶಿಯಲ್ಲಿರುವ ಖಾಸಗಿ ಕಣ್ಣಿನ ಆಸ್ಪತ್ರೆಯಲ್ಲಿ ಡಿಸೆಂಬರ್ 2024 ಮತ್ತು ಮಾರ್ಚ್ 2025 ರಲ್ಲಿ ವೇಳೆ ನಡೆಸಿದ ಕಣ್ಣಿನ ಶಸ್ತ್ರಚಿಕಿತ್ಸೆಯ ರೋಗಿಗಳಲ್ಲಿ ಗಂಭೀರ ಸೋಂಕಿನ ಸಮಸ್ಯೆ ಕಂಡುಬಂದಿದೆ.
ಆರೋಪಿ ವೈದ್ಯರು ದುಡುಕಿನ, ಆತುರ ಮತ್ತು ನಿರ್ಲಕ್ಷ್ಯದ ರೀತಿಯಲ್ಲಿ ನೇತ್ರ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿದೆ, 65 ವರ್ಷಕ್ಕಿಂತ ಮೇಲ್ಪಟ್ಟ ದಂಪತಿಗಳು ಸೇರಿದಂತೆ ಐವರು ರೋಗಿಗಳಿಗೆ ತೀವ್ರ ಕಣ್ಣಿನ ಗಾಯಗಳಾಗಿವೆ. ಶಸ್ತ್ರಚಿಕಿತ್ಸೆಯ ನಂತರ ಸಂತ್ರಸ್ತರಿಗೆ ಸ್ಯೂಡೋಮೊನಾಸ್ ವೈರಸ್‌ನಿಂದ ಉಂಟಾದ ಗಂಭೀರ ಸೋಂಕುಗಳು ಪತ್ತೆಯಾಗಿವೆ ಎಂದು ವಾಶಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಮಹಾರಾಷ್ಟ್ರ ಮೆಡಿಕಲ್ ಕೌನ್ಸಿಲ್‌ನಿಂದ ತಮ್ಮ ಪರವಾನಗಿಗಳನ್ನು ಅಗತ್ಯವಾಗಿ ನವೀಕರಿಸದೆಯೇ ವೈದ್ಯರು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ ಎಂದು ಅವರು ಹೇಳಿದರು.