Select Your Language

Notifications

webdunia
webdunia
webdunia
webdunia

ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ, ೪೫೦ಕ್ಕೆ ಸಿಗುತ್ತಾ ಎಲ್‌ಪಿಜಿ ಸಿಲಿಂಡರ್..?

Madhya Pradesh
ಮಧ್ಯಪ್ರದೇಶ , ಸೋಮವಾರ, 13 ನವೆಂಬರ್ 2023 (19:30 IST)
ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರವನ್ನು ಹಿಡಿಯಲು ಹಲವು ತಂತ್ರಗಳ ಮೊರೆ ಹೋಗಿದೆ. ಒಂದು ಕಡೆ ಚುನಾವಣಾ ತಂತ್ರಗಾರಿಕೆ, ಮತ್ತೊಂದು ಕಡೆ ಮತದಾರರ ಮನವೊಲಿಸಲು, ಆಶ್ವಾಸನೆ ಪಟ್ಟಿಗಳ ಸರಮಾಲೆ. ಹೀಗೆ ಒಂದಾ ಎರಡಾ ಹೇಳಿ ಬಿಜೆಪಿ ನಾಯಕರ ಸ್ಟಾಟರ್ಜಿ.

ಸದ್ಯ ಈಗ ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಣ್ ನೇತೃತ್ವದ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಆದರೆ ಇದೇ ನವಂಬರ್ ೧೭ಕ್ಕೆ ಮಧ್ಯಪ್ರದೇಶದ ವಿಧಾನಸಭೆಗೆ ಚುನಾವಣೆ ಎದುರಾಗ್ತಾ ಇದೆ. ಹಾಗಾಗಿ ಮತ್ತೇ ಇಲ್ಲಿ ಅಧಿಕಾರವನು ಸ್ಥಾಪಿಸೋದಕ್ಕೆ ಡೆಲ್ಲಿಯ ಬಿಜೆಪಿಯ ವರಿಷ್ಠರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಚುನಾವಣಾ ಪೂರ್ವ ಸಮೀಕ್ಷೆಗಳ ಲೆಕ್ಕಾಚಾರದಂತೆ ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆ ಆಗಬಹುದೆಂಬ ಮಾತಿದೆ. ಆಡಳಿತ ವಿರೋಧಿಯ ಅಲೆ ಬಿಜೆಪಿಯನ್ನು ಕಾಡ್ತಿದೆ.

ಶತಯಗತಾಯ ಮಧ್ಯಪ್ರದೇಶದಲ್ಲಿ ಬಿಜೆಪಿಯೂ ಅಧಿಕಾರದ ಗದ್ದುಗೆಯನ್ನು ಏರಲೇಬೇಕೆಂಬ ಹಠಕ್ಕೆ ಬಿದ್ದಿದೆ. ಅದಕ್ಕಾಗಿ  ಬಿಜೆಪಿಗೆ ಮಧ್ಯಪ್ರದೇಶದ ಮತದಾರ ಆರ್ಶಿವಾದ ಮಾಡಿದರೆ, ೪೫೦ರೂಪಾಯಿಗೆ ಅಡುಗೆ ಸಿಲಿಂಡರ್ ನೀಡುವ ಭರವಸೆಯನ್ನು ಕೊಟ್ಟಿದೆ.
 
ಹೌದು.. ಇಂದೋರ್‌ನಲ್ಲಿ ಬಿಜೆಪಿಯ ಚುನಾವಣಾ ಪ್ರಚಾರದ ವೇಳೆ ಕೇಂದ್ರ ಗೃಹಸಚಿವ ಅಮಿತ್ ಶಾ, ಬಿಜೆಪಿಯೂ ಮತ್ತೆ ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೇ, ಎಲ್‌ಪಿಜಿ ಸಿಲಿಂಡರ್ ಕೇವಲ ೪೫೦ಕ್ಕೆ ಸಿಗಲಿದೆ ಅನ್ನುವ ಆಶ್ವಾಸನೆಯನ್ನು ಕೊಟ್ಟಿದ್ದಾರೆ..

Share this Story:

Follow Webdunia kannada

ಮುಂದಿನ ಸುದ್ದಿ

ಪಂಚರಾಜ್ಯಗಳ ಎಲೆಕ್ಷನ್ ಬಳಿಕ ಕೆಪಿಸಿಸಿಯಲ್ಲಿ ಭಾರೀ ಬದಲಾವಣೆನಾ...?