Publish Date: Thu, 02 Nov 2023 (14:00 IST)
Updated Date: Thu, 02 Nov 2023 (13:43 IST)
ತೈಲ ಮಾರುಕಟ್ಟೆ ಕಂಪನಿಗಳು ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯನ್ನು 100 ರೂ. ಹೆಚ್ಚಿಸಿದೆ. ಈ ಮೂಲಕ ಕಳೆದ ಎರಡು ತಿಂಗಳಲ್ಲಿ ವಾಣಿಜ್ಯ LPG ಸಿಲಿಂಡರ್‌ಗಳಲ್ಲಿ ಎರಡನೇ ಬಾರಿ ಬೆಲೆ ಏರಿಕೆಯಾಗಿದೆ.
ಪರಿಷ್ಕೃತ ದರ ನವೆಂಬರ್ 1 ರಿಂದ ಜಾರಿಗೆ ಬರಲಿದೆ. ಈಗಾಗಲೇ ಹೋಟೆಲ್‌ಗಳು ಗ್ರಾಹಕರಿಗೆ ತಿಂಡಿ - ಕಾಫಿಯ ಬೆಲೆ ಹೆಚ್ಚಿಸಿದ್ದು, ಮತ್ತೊಮ್ಮೆ ದರ ಹೆಚ್ಚಾದರೆ ಜನಸಾಮಾನ್ಯರಿಗೂ ಇದರ ಬಿಸಿ ತಟ್ಟುತ್ತದೆ ಅಂತಾ ಹೇಳಲಾಗಿದೆ.