Select Your Language

Notifications

webdunia
webdunia
webdunia
webdunia

ಬೆಲೆ ಏರಿಕೆ ಹೊತ್ತಲ್ಲೇ ಜನತೆಗೆ ಮತ್ತೊಂದು ಶಾಕ್

ಬೆಲೆ ಏರಿಕೆ ಹೊತ್ತಲ್ಲೇ ಜನತೆಗೆ ಮತ್ತೊಂದು ಶಾಕ್
bangalore , ಶುಕ್ರವಾರ, 27 ಅಕ್ಟೋಬರ್ 2023 (13:00 IST)
ಮಾರುಕಟ್ಟೆಯಲ್ಲಿ ಈರುಳ್ಳಿಗೆ  ಡಿಮ್ಯಾಂಡ್ ಹೆಚ್ಚಿದೆ.ಶತಕದತ್ತ ಈರುಳ್ಳಿ ಬೆಲೆ ಎರಡೇ ವಾರದಲ್ಲಿ ಬೆಲೆ 60% ಏರಿಕೆಯಾಗಿದೆ. ಈರುಳ್ಳಿ ದರ ಕೆಜಿಗೆ 65 ರೂಪಾಯಿಯಾಗಿದ್ದು,ಗ್ರಾಹಕರಿಗೆ ಈರುಳ್ಳಿ ದರ ಕಣ್ಣೀರು ತರಿಸಲಿದೆ.ಮಳೆ ಕೊರತೆಯಿಂದಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.ಇದರಿಂದ ಕೆಜಿ ಈರುಳ್ಳಿದರ 60- 65 ರೂಪಾಯಿಗೆ ಮಾರಾಟ ಮಾಡಲಾಗ್ತಿದೆ.
 
ಈ ಬಾರಿ ಮಳೆ ಕೈ ಕೊಟ್ಟಿರೋದ್ರಿಂದ ಮಾರುಕಟ್ಟೆಯಲಿ ಎಲ್ಲಾ ದಿನಸಿ ಹಾಗೂ ತರಕಾರಿಗಳ ಬೆಲೆ ಏರಿಕೆ ಸಾಧ್ಯತೆ ಇದೆ.ಇದೇ ಪರಿಸ್ಥಿತಿ ಮುಂದುವರೆದರೆ ಕೆಜಿಗೆ 80-100 ಈರುಳ್ಳಿ ದರ ತಲುಪುವ ಸಾಧ್ಯತೆ ಇದೆ.ಹೊರ ರಾಜ್ಯಗಳಿಂದಲೂ ಈರುಳ್ಳಿ ಬಾರದ ಹಿನ್ನೆಲೆ ಮುಂಬೈ ಮಾರುಕಟ್ಟೆಯಲ್ಲಿ ದರ ಏರಿಕೆಯಾಗಿದೆ.15 ದಿನಗಳ ಹಿಂದೆಯಷ್ಟೇ 100 ರೂಪಾಯಿಗೆ 3-4 ಕೆಜಿ ಸಿಗ್ತಿದ್ದ ಈರುಳ್ಳಿ ಇದೀಗ ಕೇವಲ 15 ದಿನಗಳಲ್ಲಿ ಅರ್ಧ ಶತಕದಾಟ್ಟಿದೆ.ದರ ಏರಿಕೆ ಕಂಡು ಗ್ರಾಹಕರು ಶಾಕ್ ಆಗಿದ್ದಾರೆ.ಮುಂದಿನ ದಿನಗಳಲ್ಲಿ ಇದೇ ರೀತಿ ದರ ಏರಿಕೆಯಾದರೆ  ಈರುಳ್ಳಿಗೆ ಮಾರುಕಟ್ಟೆಯಲ್ಲಿ ಬಾರಿ ಡಿಮ್ಯಾಂಡ್ ಶುರುವಾಗಲಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಅರಣ್ಯ ಅಧಿಕಾರಿಗಳ ಮೇಲೆ ಹುಲಿ ಉಗುರು ಆರೋಪ