Publish Date: Mon, 27 Aug 2018 (09:56 IST)
Updated Date: Mon, 27 Aug 2018 (09:58 IST)
ನವದೆಹಲಿ: ಪತ್ನಿಯನ್ನು ಕೊಂದ ಈ ಪತಿ ಮಹಾಶಯ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳದಂತೆ ಭಾರೀ ಉಪಾಯವನ್ನೇ ಮಾಡಿಕೊಂಡಿದ್ದ. ಅದೇನು ಗೊತ್ತಾ?
ದೆಹಲಿಯ ನಿವಾಸಿ ಲಲಿತ್ ಜೈನ್ ಎಂಬಾತ ತನ್ನ ಪತ್ನಿಯನ್ನು ಹತ್ಯೆ ಮಾಡಿದ್ದ. ಬಳಿಕ ತನ್ನ ಕುಟುಂಬದವರ ಸಹಾಯದಿಂದ ಮೃತದೇಹ ಯಾರಿಗೂ ಸಿಗದಂತೆ ಮಾಡಲು ಭಾರೀ ಉಪಾಯವನ್ನೇ ಹೆಣೆದ.
ಪತ್ನಿಯ ಮೃತದೇಹವನ್ನು ತನ್ನ ಕಾರಿನ ಸೀಟುಗಳ ಅಡಿಯಲ್ಲಿ ಇರಿಸಿ, ತನ್ನ ಅತ್ತಿಗೆ ಮತ್ತು ಆಕೆಯ ಪುತ್ರನನ್ನು ಅದೇ ಸೀಟಿನ ಮೇಲೆ ಕುಳ‍್ಳಿರಿಸಿದ್ದ. ಇದರಿಂದ ಹೆಣ ಕಾರಿನ ಸೀಟಿನ ಅಡಿಯಲ್ಲಿರುವುದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ನಂತರ ಮೃತದೇಹವನ್ನು 300 ಕಿ.ಮೀ. ದೂರದ ಮುಸ್ಸೋರಿ ಬಳಿ ಕಮರಿಯೊಂದಕ್ಕೆ ಬಿಸಾಕಿ ಪೊಲೀಸ್ ಠಾಣೆಗೆ ಬಂದು ನಾಪತ್ತೆ ಪ್ರಕರಣ ದಾಖಲಿಸಿದ್ದ.
ಇದರಿಂದ ಪೊಲೀಸರಿಗೆ ಬೇಗನೇ ಮೃತದೇಹ ಪತ್ತೆ ಮಾಡಲು ಸಾಧ‍್ಯವಾಗಲ್ಲ. ಮೃತದೇಹ ಪತ್ತೆ ಹಚ್ಚುವಷ್ಟರಲ್ಲಿ ಗುರುತು ಸಿಕ್ಕದ ಹಾಗೆ ಆಗಿರುತ್ತದೆ ಎಂಬುದು ಆತನ ಉಪಾಯವಾಗಿತ್ತು. ಆದರೆ ದುರದೃಷ್ಟವಶಾತ್ ಪೊಲೀಸರು ಈತನ ಸಂಚನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.