ಥಾಯ್ಲೆಂಡ್ ನಲ್ಲಿ ಭಾರತೀಯ ವ್ಯಕ್ತಿ ಮಾಡಿದ ಇಂತಹ ನೀಚ ಕೃತ್ಯ

ಶನಿವಾರ, 25 ಆಗಸ್ಟ್ 2018 (07:08 IST)
ಥಾಯ್ಲೆಂಡ್ : ಭಾರತೀಯ ಮೂಲದ ವ್ಯಕ್ತಿಯೊಬ್ಬ ಥಾಯ್ಲೆಂಡ್ ನಲ್ಲಿ ಹದಿನಾಲ್ಕು ವರ್ಷದ ಹುಡುಗಿ ಮೇಲೆ ಅತ್ಯಾಚಾರ ಎಸೆಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.


ಆರೋಪಿ 28 ವರ್ಷದ ಬೆನ್ನೂರ್ ಯತೀಶ ಎಂಬುದಾಗಿ ತಿಳಿದುಬಂದಿದ್ದು, ಇತ ಆನ್​ಲೈನ್​ನಲ್ಲಿ ಪರಿಚಯವಾದ ಹುಡುಗಿಯಬ್ಬಳನ್ನು  ಭೇಟಿಯಾಗುವಂತೆ ಕೇಳಿದ್ದ ಕಾರಣ ಆಕೆ ಆತನ ಮನೆಗೆ ತೆರಳಿದ್ದಾಳೆ. ಆಗ ಆತ ಮದ್ಯ ಕುಡಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಹುಡುಗಿ ಹೇಳಿಕೊಂಡಿದ್ದಾಳೆ.


ಆದರೆ ಇದನ್ನೆಲ್ಲಾ ತಳ್ಳಿ ಹಾಕಿದ್ದ ಯುವಕ, ಹುಡುಗಿಯನ್ನು ತನ್ನ ರೂಮಿಗೆ ಕರೆದು ಆಕೆಗೆ ಜ್ಯೂಸ್ ನೀಡಿದ್ದಾಗಿ ಹೇಳಿಕೆ ನೀಡಿದ್ದಾನೆ. ಹುಡುಗಿ ಈ ವಿಚಾರವನ್ನು ಹೆತ್ತವರಿಗೆ ತಿಳಿಸಿದ್ದು, ಅವರು ಆರೋಪಿ ಯತೀಶನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಈ ಬಗ್ಗೆ ವಿಚಾರಣೆ ಕೂಡ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗೌರಿ ಲಂಕೇಶ್ ಹತ್ಯೆ ಪ್ರಕರಣ: ಐವರು ವಶಕ್ಕೆ