Select Your Language

Notifications

webdunia
webdunia
webdunia
webdunia

ಅತ್ಯಾಚಾರಗಳಿಂದ ತನ್ನ ಸಾಕಿದ ಬಾಲಕಿಯನ್ನು ಕಾಪಾಡಿದ ನಾಯಿ

ಅತ್ಯಾಚಾರಗಳಿಂದ  ತನ್ನ ಸಾಕಿದ ಬಾಲಕಿಯನ್ನು ಕಾಪಾಡಿದ ನಾಯಿ
ಮಧ್ಯಪ್ರದೇಶ , ಮಂಗಳವಾರ, 21 ಆಗಸ್ಟ್ 2018 (15:11 IST)
ಮಧ್ಯಪ್ರದೇಶ : ಅತ್ಯಾಚಾರ ಎಸಗಲು ಪ್ರಯತ್ನಿಸಿದ ಕಾಮುಕರಿಂದ ಬಾಲಕಿಯೊಬ್ಬಳನ್ನ ಆಕೆ ಸಾಕಿದ ನಾಯಿಯೇ ರಕ್ಷಿಸಿ ಆರೋಪಿಗಳನ್ನು ಪೊಲೀಸರಿಗೆ ಹಿಡಿದೊಪ್ಪಿಸಿದ ಘಟನೆ ಮಧ್ಯಪ್ರದೇಶದ ಸಾಗರ್‌ ಜಿಲ್ಲೆಯಲ್ಲಿ ನಡೆದಿದೆ.


ಮಧ್ಯ ಪ್ರದೇಶದ ಸಾಗರ್‌ ಜಿಲ್ಲೆಯ ಕರೀಲಾ ಎಂಬ ಗ್ರಾಮದಲ್ಲಿ ಶುಕ್ರವಾರ ರಾತ್ರಿ ವೇಳೆ ಅಪ್ರಾಪ್ತ ಬಾಲಕಿ ತನ್ನ ಸಾಕುನಾಯಿಯೊಂದಿಗೆ ಮನೆಯಿಂದ ಹೊರಗಡೆ ಹೋದಾಗ ಬಾಲಕಿಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಲು ಇಬ್ಬರು ದುಷ್ಕರ್ಮಿಗಳು ಯತ್ನಿಸಿದರು. ಆಗ ಬಾಲಕಿಯ ಜತೆಗಿದ್ದ ಸಾಕು ನಾಯಿ ಇಬ್ಬರು ಅತ್ಯಾಚಾರಿಗಳನ್ನು ಬೆನ್ನಟ್ಟಿ ಓಡಿಸಿಕೊಂಡು ಹೋಗಿ ಆರೋಪಿಯೊಬ್ಬನನ್ನು ಕಚ್ಚಿ ನೆಲಕ್ಕೆ ಬೀಳಿಸಿ ಅಕ್ಕಪಕ್ಕದ ಮನೆಯವರು ಬರುವವರೆಗೂ ಜೋರಾಗಿ ಕೂಗುತ್ತಾ ಆತನನ್ನು ಹಿಡಿದಿಟ್ಟುಕೊಂಡು ನಂತರ ಪೊಲೀಸರಿಗೆ ಒಪ್ಪಿಸಿದೆ. ಆದರೆ ಇನ್ನೊಬ್ಬ ನಾಯಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.


ಈ ಘಟನೆ ನಡೆದ ಮಾರನೆದಿನ ಬಾಲಕಿ ಪೋಷಕರು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಎರಡನೇ ಆರೋಪಿಯನ್ನು ಭಾನುವಾರ ಬಂಧಿಸಲಾಗಿದೆ. ಹಾಗೇ  ಮಕ್ಕಳ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆಯಲ್ಲಿ ಈ ಪ್ರಕರಣವನ್ನು  ದಾಖಲಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಜನರ ಸಂಕಷ್ಟ ನಿವಾರಣೆಗೆ ಸತ್ಯ ನಾರಾಯಣ ಪೂಜೆ ಮಾಡಿದ್ರು!