Select Your Language

Notifications

webdunia
webdunia
webdunia
webdunia

ಬುದ್ಧಿಮಾಂದ್ಯ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ ಟ್ರ್ಯಾಕ್ಟರ್ ಚಾಲಕ

ಚಾಮರಾಜನಗರ
ಚಾಮರಾಜನಗರ , ಶುಕ್ರವಾರ, 17 ಆಗಸ್ಟ್ 2018 (14:00 IST)
ಚಾಮರಾಜನಗರ : ಟ್ರ್ಯಾಕ್ಟರ್ ಚಾಲಕನೊಬ್ಬ 9 ವರ್ಷದ ಬುದ್ಧಿಮಾಂದ್ಯ  ಹುಡುಗಿಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿರುವ  ಘಟನೆ  ಯಳಂದೂರು ತಾಲೂಕಿನ ದುಗ್ಗಟ್ಟಿಯಲ್ಲಿ ನಡೆದಿದೆ.


 ಇತನ ಹೆಸರು ರವಿಕುಮಾರ್ ಎಂಬುದಾಗಿ ತಿಳಿದುಬಂದಿದೆ. ಇತ ವೃತ್ತಿಯಲ್ಲಿ ಟ್ರ್ಯಾಕ್ಟರ್ ಚಾಲಕನಾಗಿದ್ದು, ದುಗ್ಗಟ್ಟಿ ಗ್ರಾಮದ ಶಾಲಾವರಣದಲ್ಲಿ ಬಾಲಕಿ ಆಟ ಆಡುತ್ತಿದ್ದ ವೇಳೆ ಆಕೆಯನ್ನು ಶಾಲಾ ಕಟ್ಟಡದ ಮೇಲ್ಭಾಗಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ದೂರು ದಾಖಲಾಗಿದೆ.


ಬಾಲಕಿಯ ಸಹಪಾಠಿಗಳು ಈ ವಿಷಯವನ್ನು ಆಕೆಯ ಪೋಷಕರಿಗೆ ತಿಳಿಸುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದಾನೆ. ಸದ್ಯ ಯಳಂದೂರು ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಬ್ಲಿಕ್ ಸ್ಥಳದಲ್ಲಿ ಕಿಸ್ ಮಾಡಿದ ಪ್ರೇಮಿಗಳಿಗೆ ಆದ ಗತಿ ಏನು ಗೊತ್ತಾ...?