Select Your Language

Notifications

webdunia
webdunia
webdunia
webdunia

ನೆರೆಮನೆಯವನಿಂದ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ; ಮಗುವಿಗೆ ಜನ್ಮ ನೀಡಿದ ಬಾಲಕಿ

ಬಿಹಾರ
ಬಿಹಾರ : ಅತ್ಯಾಚಾರಕ್ಕೊಳಗಾದ 16 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಘಟನೆ ಬಿಹಾರದಲ್ಲಿ ನಡೆದಿದೆ.

ಗುರುಗ್ರಾಮ್  ರಾಜೀವನ ನಗರದಲ್ಲಿ ವಾಸವಾಗಿರುವ ಈ ಬಾಲಕಿ 10ನೇ ತರಗತಿಯಲ್ಲಿ ಓದುತ್ತಿದ್ದು, ತಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊಟ್ಟೆ ನೋವಿನ ಕಾರಣ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಗ ಆಕೆ ಗರ್ಭಿಣಿ ಎಂಬ ಸಂಗತಿ ಗೊತ್ತಾಗಿದೆ. ಮಂಗಳವಾರ ಸಂಜೆ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ.

ಈಕೆಯ ಮೇಲೆ ಪಕ್ಕದ ಮನೆ ನಿವಾಸಿ ರಾಜನ್ ತಿವಾರಿ ಕಳೆದ ವರ್ಷ ನವೆಂಬರ್ ನಲ್ಲಿ ಮೊದಲ ಬಾರಿ ಅತ್ಯಾಚಾರವೆಸಗಿದ್ದನಂತೆ. ಆಮೇಲೆ ತಂದೆ-ತಾಯಿ ಹತ್ಯೆ ಮಾಡುವುದಾಗಿ ಹೆದರಿಸಿ ಡಿಸೆಂಬರ್ ನಲ್ಲಿ ಮತ್ತೆ ಅನೇಕ ಬಾರಿ ಅತ್ಯಾಚಾರವೆಸಗಿದ್ದನಂತೆ. ನಂತರ ಆತ ನಾಲ್ಕೈದು ತಿಂಗಳ ಹಿಂದೆಯೇ ಮನೆ ಖಾಲಿ ಮಾಡಿದ್ದಾನಂತೆ. ಈ ವಿಚಾರವನ್ನು ಬಾಲಕಿ ಪೊಲೀಸರಿಗೆ ತಿಳಿಸಿದ್ದು ದೂರು ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿ ಬಂಧನಕ್ಕೆ ಮುಂದಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂ ಪತ್ನಿಯ ಕೊನೆ ಆಸೆ ಈಡೇರಿಸಲು ಮುಂದಾದ ಮುಸ್ಲಿಂ ಪತಿ