Select Your Language

Notifications

webdunia
webdunia
webdunia
webdunia

ಕುಡಿದ ಮತ್ತಿನಲ್ಲಿ ಪತ್ನಿಯ ಕೊಲೆ ಮಾಡಿದ ಪತಿ

webdunia
ವಿಶಾಖಪಟ್ಟಣ , ಗುರುವಾರ, 6 ಜನವರಿ 2022 (09:20 IST)
ವಿಶಾಖಪಟ್ಟಣ: ಕುಡಿದ ಮತ್ತಿನಲ್ಲಿ ಪತ್ನಿಯೊಂದಿಗೆ ಜಗಳವಾಡಿದ ಪತಿ ಆಕೆಯ ಗಂಟಲು ಸೀಳಿ ಕೊಲೆ ಮಾಡಿದ್ದಲ್ಲದೆ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿ ನಡೆದಿದೆ.

ಪತಿ ಮದ್ಯವ್ಯಸನಿಯಾಗಿದ್ದ. ಈ ವಿಚಾರವಾಗಿ ಪದೇ ಪದೇ ಗಂಡ-ಹೆಂಡತಿ ಮಧ್ಯೆ ಜಗಳವಾಗುತ್ತಿತ್ತು. ಈ ಬಾರಿಯೂ ಕಂಠಪೂರ್ತಿ ಕುಡಿದು ಬಂದಿದ್ದ ಪತಿಯೊಂದಿಗೆ ಪತ್ನಿ ಜಗಳವಾಡಿದ್ದಳು.

ಇದೇ ತಾರಕಕ್ಕೇರಿ ಪತಿ ಆಕೆಯ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಮನೆಯೊಳಗೆ ನೇಣಿಗೆ ಶರಣಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ತೆಯಾಯ್ತು ಕೊವಿಡ್ 19ನ ಮತ್ತೊಂದು ತಳಿ!