Publish Date: Wed, 05 Jan 2022 (10:00 IST)
Updated Date: Wed, 05 Jan 2022 (10:09 IST)
ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಅತ್ತೆಯನ್ನು ಪೊರಕೆಯಲ್ಲಿ ಹೊಡೆದು ಅಳಿಯ ಸಾಯಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
60 ವರ್ಷದ ಕಾಳಮ್ಮ ಎಂಬವರನ್ನು 35 ವರ್ಷದ ಅಳಿಯ ರಮೇಶ್ ಕೊಲೆ ಮಾಡಿದ್ದಾನೆ. ಸದಾ ತಿರುಗಾಡಿಕೊಂಡಿರುತ್ತಿದ್ದ ರಮೇಶ್ ಭಾನುವಾರ ಮನೆಗೆ ಬಂದಿದ್ದ. ಈ ವೇಳೆ ಅತ್ತೆ ಜೊತೆ ಜಗಳವಾಗಿದೆ.
ಸಂಜೆ ಆತ ಮದ್ಯದ ಬಾಟಲಿ ತಂದಿದ್ದ. ಮನೆಯವರೆಲ್ಲರೂ ಕುಡಿದ ಮತ್ತಿನಲ್ಲಿ ಜಗಳವಾಡಿಕೊಂಡಿದ್ದಾರೆ. ಪೊರಕೆಯಲ್ಲಿ ಹೊಡೆದ ಪರಿಣಾಮ ಕಾಳಮ್ಮನ ತಲೆ ಮತ್ತು ಕುತ್ತಿಗೆಗೆ ಗಾಯವಾಗಿದೆ. ಹಲ್ಲೆ ನಡೆಸಿದ ಬಳಿಕ ರಾತ್ರಿಯಿಡೀ ಕಾಳಮ್ಮನನ್ನು ಮನೆಯಿಂದ ಹೊರಹಾಕಿದ್ದ. ಅಲ್ಲಿಯೇ ಆಕೆ ಚಳಿ ಮತ್ತು ಗಾಯದ ಪರಿಣಾಮದಿಂದ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಈ ಸಂಬಂಧ ರಮೇಶ್ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿಯನ್ನು ಬಂಧಿಸಲಾಗಿದೆ.