Select Your Language

Notifications

webdunia
webdunia
webdunia
webdunia

ಮಗ ತೀರಿಕೊಂಡನೆಂದು ಸೊಸೆಗೆ ಮಾವ ಈ ಶಿಕ್ಷೆ ಕೊಟ್ಟಿದ್ದು ಸರೀನಾ?!

ಮಗ ತೀರಿಕೊಂಡನೆಂದು ಸೊಸೆಗೆ ಮಾವ ಈ ಶಿಕ್ಷೆ ಕೊಟ್ಟಿದ್ದು ಸರೀನಾ?!
ಹೈದರಾಬಾದ್ , ಬುಧವಾರ, 5 ಜನವರಿ 2022 (09:10 IST)
ಹೈದರಾಬಾದ್: ಮಗ ಆತ್ಮಹತ್ಯೆ ಮಾಡಿಕೊಂಡ ನೋವಿನಲ್ಲಿದ್ದ ತಂದೆ ತನ್ನ ಸೊಸೆಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಮಗ-ಸೊಸೆ ಪ್ರೀತಿಸಿ ಮದುವೆಯಾಗಿದ್ದರು. ಕೆಲವು ತಿಂಗಳುಗಳಿಂದ ಪ್ರತ್ಯೇಕವಾಗಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು. ಆದರೆ ಇಬ್ಬರ ನಡುವೆ ಆಗಾಗ ಕಲಹವಾಗುತ್ತಿತ್ತು. ಇದರಿಂದ ಮನನೊಂದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದ.

ಇದೇ ಬೇಸರದಲ್ಲಿ ಮಾವ ಸೊಸೆಗೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವವಾದ ಪರಿಣಾಮ ಸೊಸೆ ಮೃತಪಟ್ಟಿದ್ದಾಳೆ. ಘಟನೆ ಬಳಿಕ ಆರೋಪಿ ಮಾವ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಿಕ್ಸಿಂಗ್ ಡೋಸ್ ಹೆಚ್ಚು ಎಫೆಕ್ಟ್!?