ಹೆಂಡತಿ ತನ್ನ ಗಂಡವನ್ನು ಕತ್ತರಿಸಿ ಕೊಲೆ ಮಾಡಿರುವ ಘಟನೆ ರಷ್ಯಾದಲ್ಲಿ ನಡೆದಿದೆ.
30 ವರ್ಷದ ರಷ್ಯಾದ ಪ್ರಸಿದ್ಧ ರಾಪರ್ ಆಂಡಿ ಕಾರ್ಟ್ರೈಟ್ ಅನ್ನು ಆತನ ಪತ್ನಿಯೇ ಮುಗಿಸಿದ್ದಾಳೆ. ತನ್ನ ಕೈಯಾರೆ ಗಂಡನನ್ನು ಕತ್ತರಿಸಿದ ಪತ್ನಿ ಕಥೆ ಕಟ್ಟಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಇದೀಗ ಜೈಲೂಟ ಮಾಡುತ್ತಿದ್ದಾಳೆ.
ಹೆಂಡತಿ ತನ್ನ ಗಂಡ ಆಂಡಿ ಕಾರ್ಟ್ರೈಟ್ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕೊಲೆ ಮಾಡಿದ್ದಾಳೆ. ಕೊಲೆ ಮಾಡುವ ವೇಳೆ ಗಂಡ ಉಸಿರಾಡುತ್ತಿದ್ದನು ಮತ್ತು ಆಮ್ಲಜನಕವನ್ನು ತೆಗೆದುಕೊಳ್ಳುತ್ತಿದ್ದನು.
ರಷ್ಯಾದ ಉನ್ನತ ಪ್ರಕರಣ ಹೊಸ ವಿಧಿವಿಜ್ಞಾನ ಸಾಕ್ಷ್ಯದ ಆಧಾರದ ಮೇಲೆ ಈ ವಿಚಾರವನ್ನು ಬಹಿರಂಗಪಡಿಸಲಾಗಿದೆ. 30 ವರ್ಷದ ಆಂಡಿ ಕಾರ್ಟ್ರೈಟ್ ಅವರ ದೇಹವನ್ನು ಕತ್ತರಿಸುವಾಗ ಜೀವಂತವಾಗಿದ್ದರು ಎಂದು ಹೊಸ ಪುರಾವೆಗಳು ತಿಳಿಸುತ್ತವೆ.
ಆಂಡಿ ಕಾರ್ಟ್ರೈಟ್ನ ನಿಜವಾದ ಹೆಸರು ಅಲೆಕ್ಸಾಂಡರ್ ಯುಷ್ಕೊ. ಅವರು ಜುಲೈ 2020 ರಲ್ಲಿ ಸೇಂಟ್ ಪೀಟರ್ಸ್ಬರ್ಗ್ ಮನೆಯಲ್ಲಿ ಕೊಲೆಯಾದರು. ಮೊದಲಿಗೆ ಅವರ ಸಾವಿನ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಆದರೆ ಈಗ ಪುರಾವೆಗಳ ಆಧಾರದ ಮೇಲೆ ಇದು ಯೋಜಿತ ಕೊಲೆ ಎಂದು ತಿಳಿದುಬಂದಿದೆ.
ಅಲೆಕ್ಸಾಂಡರ್ ಯುಷ್ಕೊ ಪತ್ನಿ 37 ವರ್ಷದ ಮರೀನಾ ಕೋಖಾಲ್, ತಾನು ಕಾರ್ಟ್ರೈಟ್ನ ದೇಹವನ್ನು ಕತ್ತರಿಸಿ ಫ್ರಿಜ್ನಲ್ಲಿ ಸಂಗ್ರಹಿಸಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ. ಆದರೆ ಪತಿ ಡ್ರಗ್ ಓವರ್ಡೋಸ್ನಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.