Publish Date: Wed, 28 Apr 2021 (11:16 IST)
Updated Date: Wed, 28 Apr 2021 (11:18 IST)
ನವದೆಹಲಿ : ಎಂಟು ತಿಂಗಳ ಗರ್ಭಿಣಿ ಪತ್ನಿಯನ್ನು ಪತಿ ಗುಂಡಿಕ್ಕಿ ಕೊಂದ ಘಟನೆ ಆಗ್ನೇಯ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದಿದೆ.
ಸಂತ್ರಸ್ತೆ ಮಾದಕ ದ್ರವ್ಯ ವ್ಯಸನಿಯಾಗಿದ್ದಳು. ಈ ಹಿನ್ನಲೆಯಲ್ಲಿ ಆಕೆಯನ್ನು ಜೈಲಿಗೆ ಹಾಕಲಾಗಿತ್ತು. ಆದರೆ ಹೆರಿಗೆಯ ಹಿನ್ನಲೆಯಲ್ಲಿ ಆಕೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಆದರೆ ಪತಿ ಆಕೆ ಜೈಲಿನಲ್ಲಿದ್ದಾಗ ಅವಳ ಸಹೋದರಿಯ ಸಂಬಂಧ ಹೊಂದಿದ್ದ. ಇದರಿಂದ ಅವರಿಬ್ಬರ ನಡುವೆ ಜಗಳವಾಗಿದೆ. ಇದರಿಂದ ಕೋಪಗೊಂಡ ಪತಿ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ.
ಘಟನೆಯಲ್ಲಿ ಸಂತ್ರಸ್ತೆ ಸಾವನಪ್ಪಿದ್ದಾಳೆ. ಪೊಲೀಸರು ಪತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಹಾಗೂ ಈ ಪ್ರಕರಣದಲ್ಲಿ ಸಂತ್ರಸ್ತೆಯ ಸಹೋದರಿ ಭಾಗಿಯಾಗಿದ್ದಾಳೆಯೇ ಎಂದು ತನಿಖೆ ನಡೆಯುತ್ತಿದೆ ಎನ್ನಲಾಗಿದೆ.