Publish Date: Wed, 28 Apr 2021 (11:13 IST)
Updated Date: Wed, 28 Apr 2021 (11:15 IST)
ಕೋಲಾರ : 17 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಆಕೆಯ ಗೆಳೆಯ ಮಾನಭಂಗ ಎಸಗಿ ಅದನ್ನು ವಿಡಿಯೋ ಮಾಡಿ ಸ್ನೇಹಿತರಿಗೆ ತೋರಿಸಿದ ಘಟನೆ ಮಾಲೂರು ತಾಲೂಕಿನಲ್ಲಿ ನಡೆದಿದೆ.
ಸಂತ್ರಸ್ತೆ ಹಾಗೂ ಆರೋಪಿ ಒಂದೇ ಕಾಲೇಜಿನಲ್ಲಿ ಓದುತ್ತಿದ್ದು, ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಆತ ತಮಗೆ 18 ವರ್ಷದ ತುಂಬಿದ ಬಳಿಕ ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಮಾನಭಂಗ ಎಸಗಿ ಅದನ್ನು ವಿಡಿಯೋ ಮಾಡಿ ಸ್ನೇಹಿತರಿಗೆ ತೋರಿಸಿ ಖುಷಿಪಡುತ್ತಿದ್ದ. ಬಳಿಕ ಆ ವಿಡಿಯೋ ತೋರಿಸಿ ಬೆದರಿಕೆ ಹಾಕಿ ಆಕೆಯ ಮೇಲೆ ಪದೇ ಪದೇ ಮಾನಭಂಗ ಎಸಗುತ್ತಿದ್ದ.
ಈ ಬಗ್ಗೆ ಸಂತ್ರಸ್ತೆ ತನ್ನ ತಾಯಿಗೆ ತಿಳಿಸಿದ್ದು, ತಾಯಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಸೇರಿ ಆತನ ಇಬ್ಬರು ಗೆಳೆಯರನ್ನು ಬಂಧಿಸಿದ್ದಾರೆ.