Select Your Language

Notifications

webdunia
webdunia
webdunia
webdunia

ಮೊದಲ ರಾತ್ರಿಯೇ ಪತ್ನಿ ಗರ್ಭಿಣಿ ಎಂದರೆ ಗಂಡನಿಗೆ ಹೇಗಾಗಬೇಡ?!

ಮೊದಲ ರಾತ್ರಿಯೇ ಪತ್ನಿ ಗರ್ಭಿಣಿ ಎಂದರೆ ಗಂಡನಿಗೆ ಹೇಗಾಗಬೇಡ?!
ಲಕ್ನೋ , ಸೋಮವಾರ, 3 ಜನವರಿ 2022 (09:58 IST)
ಲಕ್ನೋ: ಮೊದಲ ರಾತ್ರಿಯಂದು ಪತ್ನಿಯೊಂದಿಗೆ ಸುಮಧುರ ರಾತ್ರಿ ಕಳೆಯಲು ಸಜ್ಜಾಗಿದ್ದ ಗಂಡನಿಗೆ ಶಾಕ್ ಕಾದಿತ್ತು. ಮೊದಲ ರಾತ್ರಿಯಂದೇ ಪತ್ನಿ 5 ತಿಂಗಳ ಗರ್ಭಿಣಿ ಎನ್ನುವ ವಿಚಾರ ಆತನಿಗೆ ತಿಳಿಯುತ್ತದೆ.

ಮೀರತ್ ನಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು ಈ ಪ್ರಕರಣವೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಮೊದಲ ರಾತ್ರಿಗೆ ತಯಾರಾಗುತ್ತಿದ್ದ ವಧುವಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ.

ಹೀಗಾಗಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನಿಂಗ್ ಮಾಡಿಸಿದಾಗ 5 ತಿಂಗಳ ಗರ್ಭಿಣಿ ಎಂದು ಗೊತ್ತಾಗಿದೆ. ಹುಡುಗಿ ಮನೆಯವರು ಹಾಗಾಗಲು ಸಾಧ‍್ಯವೇ ಇಲ್ಲ ನೀವೇ ಸುಳ್ಳು ಹೇಳುತ್ತಿದ್ದೀರಿ. ವಿಷಯ ದೊಡ್ಡದು ಮಾಡಿದರೆ ಪೊಲೀಸ್ ದೂರು ನೀಡುವುದಾಗಿ ಬೆದರಿಕೆ ಹಾಕುತ್ತಾರೆ.

ಹೀಗಾಗಿ ಹುಡುಗನೂ ಸುಮ್ಮನಾಗುತ್ತಾನೆ. ಆದರೆ ಇದಾದ ಬಳಿಕ ಹುಡುಗಿ ಮನೆಯವರೇ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸುತ್ತಾರೆ. ಆಗ ಬೇರೆ ದಾರಿಯಿಲ್ಲದೇ ಪೊಲೀಸರಿಗೆ ದೂರು ನೀಡುತ್ತಾನೆ. ವಿಚಾರಣೆ ವೇಳೆ ಪತ್ನಿ ತನಗೆ ಇದಕ್ಕೆ ಮೊದಲು ಬೇರೊಬ್ಬನೊಂದಿಗೆ ಸಂಬಂಧವಿತ್ತು ಎಂದು ಒಪ್ಪಿಕೊಳ್ಳುತ್ತಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣು ಮಕ್ಕಳನ್ನು 8 ಲಕ್ಷಕ್ಕೆ ಮಾರಿದ ತಂದೆ ಅರೆಸ್ಟ್