Publish Date: Mon, 03 Jan 2022 (09:30 IST)
Updated Date: Mon, 03 Jan 2022 (09:35 IST)
ತುಮಕೂರು: ತೆಂಗಿನ ಕಾಯಿ ಕದ್ದ ತಪ್ಪಿಗೆ ಆರೋಪಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಮನಸೋ ಇಚ್ಛೆ ಥಳಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ಹರೀಶ್ ಎಂಬಾತ ಮೂರು ತೆಂಗಿನ ಕಾಯಿಗಳನ್ನು ಕದ್ದಿದ್ದನಂತೆ. ಇದೇ ಕಾರಣಕ್ಕೆ ತೋಟದ ಮಾಲಿಕ ರಾಜು ಎಂಬಾತ ಆತನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾನೆ.
ಈ ಸಂಬಂಧ ಹರೀಶ್ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಡಿಸೆಂಬರ್ 18 ರಂದೇ ಘಟನೆ ನಡೆದಿದ್ದು, ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ.