Publish Date: Wed, 23 Sep 2020 (10:51 IST)
Updated Date: Wed, 23 Sep 2020 (10:52 IST)
ನವದೆಹಲಿ: ಹುಟ್ಟಲಿರುವ ಮಗು ಗಂಡೋ, ಹೆಣ್ಣೋ ಎಂದು ತಿಳಿಯಲು ಪತಿಮಹಾಶಯನೊಬ್ಬ ಪತ್ನಿ ಜತೆಗೆ ಜಗಳವಾಡಿ ಆಕೆಯ ಮೇಲೆ ಕೋಲಿನಿಂದ ಹಿಗ್ಗಾ ಮುಗ್ಗಾ ಥಳಿಸಿದ ಪರಿಣಾಮ ಆಕೆಯ ಗರ್ಭದಲ್ಲಿದ್ದ ಗಂಡು ಮಗು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.
ಆರೋಪಿ ಪತಿಯ ಹೊಡೆತಕ್ಕೆ ಮಹಿಳೆಯ ಹೊಟ್ಟೆಗೆ ಆಳವಾದ ಗಾಯವಾಗಿದೆ. ಗಲಾಟೆ ನೋಡಿ ನೆರೆಹೊರೆಯ ವ್ಯಕ್ತಿ ಈಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದ್ದು, ಆರೋಪಿ ಪತಿ ಹೀನ ಕೃತ್ಯವೆಸಗಿ ಸ್ಥಳದಿಂದ ಪರಾರಿಯಾಗಿದ್ದಾನೆ.