Select Your Language

Notifications

webdunia
webdunia
webdunia
webdunia

ಆಟದ ನೆಪವೊಡ್ಡಿ ಹುಡುಗಿಯನ್ನು ಕರೆದುಕೊಂಡು ಹೋದ ಹುಡುಗ ಮಾಡಿದ್ದೇನು ಗೊತ್ತಾ?

ಆಟದ ನೆಪವೊಡ್ಡಿ ಹುಡುಗಿಯನ್ನು ಕರೆದುಕೊಂಡು ಹೋದ ಹುಡುಗ ಮಾಡಿದ್ದೇನು  ಗೊತ್ತಾ?
ಬೆಂಗಳೂರು , ಬುಧವಾರ, 23 ಸೆಪ್ಟಂಬರ್ 2020 (08:21 IST)
ಬೆಂಗಳೂರು : 18 ವರ್ಷದ ಹುಡುಗಿಗೆ ಹುಡುಗನೊಬ್ಬ ಲೈಂಗಿಕ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಆತನನ್ನು ಪೋಲಿಸರು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪೋಷಕರು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಇದ್ದ  ಹುಡುಗಿಯನ್ನು ನೆಪವೊಡ್ಡಿ  ಕರೆದೊಯ್ದ ಹುಡುಗ ಆಕೆಗೆ ಕಿರುಕುಳ ನೀಡಿದ್ದಾನೆ. ಇದನ್ನು ನೋಡಿದ ನೆರೆಹೊರೆಯವನೊಬ್ಬ ಪ್ರಶ್ನಿಸಿದಾಗ ಆತನ ಬಳಿ ಕೆಳಗೆ ಬಿದ್ದ ಆಕೆಗೆ ಸಹಾಯ ಮಾಡುತ್ತಿರುವುದಾಗಿ ಸುಳ್ಳು ಹೇಳಿದ್ದಾನೆ.

ಬಳಿಕ ಮನೆಗೆ ಬಂದ ಹುಡುಗಿಯ ಮೈ ಮೇಲೆ ಗಾಯಗಳನ್ನು ಕಂಡು ಆಕೆಯನ್ನು ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆಯ ಮೇಲೆ ದೌರ್ಜನ್ಯ ನಡೆದಿರುವುದು ತಿಳಿದುಬಂದಿದೆ. ಈ ಬಗ್ಗೆ ಹುಡುಗಿಯ ಪೋಷಕರು ದೂರು ನೀಡಿದ್ದು, ಈ ಹಿನ್ನಲೆಯಲ್ಲಿ ಪೊಲೀಸರು ಆರೋಪಿ ಹುಡುಗನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

5 ವರ್ಷದ ಮಗುವನ್ನು ಅಪಹರಿಸಿ ದುಷ್ಕೃತ್ಯ ಎಸಗಿದ ಪಾಪಿ