Select Your Language

Notifications

webdunia
webdunia
webdunia
webdunia

ರೈಲಿನಲ್ಲಿ ನೀಡುವ ಹೊದಿಕೆಯನ್ನು ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ: ಸಚಿವರ ಉತ್ತರ ವೈರಲ್

Railways

Krishnaveni K

ನವದೆಹಲಿ , ಗುರುವಾರ, 28 ನವೆಂಬರ್ 2024 (10:39 IST)
ನವದೆಹಲಿ: ರೈಲು ಪ್ರಯಾಣದ ವೇಳೆ ನೀಡಲಾಗುವ ಹೊದಿಕೆ, ಬೆಡ್ ಶೀಟ್ ಗಳನ್ನು ತೊಳೆಯುತ್ತಾರೋ ಇಲ್ಲವೋ, ಎಷ್ಟು ದಿನಕ್ಕೊಮ್ಮೆ ತೊಳೆಯುತ್ತಾರೆ ಎಂಬ ನಿಮ್ಮ ಅನುಮಾನಗಳಿಗೆ ಈಗ ಉತ್ತರ ಸಿಕ್ಕಿದೆ. ಈ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.

ಲೋಕಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಸಚಿವರು ರೈಲು ಪ್ರಯಾಣದ ವೇಳೆ ಪ್ರಯಾಣಿಕರಿಗೆ ನೀಡಲಾಗುವ ಹೊದಿಕೆಗಳನ್ನು ತಿಂಗಳಿಗೊಮ್ಮೆ ತೊಳೆಯಲಾಗುತ್ತದೆ ಎಂದಿದ್ದಾರೆ. ಹಾಸಿಗೆಯ ಹೊದಿಕೆಯಾಗಿ ಬಳಸುವ ಬೆಡ್ ಶೀಟ್ ನ್ನು ಬೆಡ್ ರೋಲ್ ಕಿಟ್ ನಲ್ಲಿ ನೀಡಲಾಗುತ್ತದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಪ್ರಯಾಣಿಕರು ದುಡ್ಡು ಕೊಟ್ಟು ಪ್ರಯಾಣಿಸುವಾಗ ನೀಡುವ ಹೊದಿಕೆಗಳನ್ನು ತಿಂಗಳಿಗೊಮ್ಮೆ ಮಾತ್ರ ತೊಳೆಯಲಾಗುತ್ತಿದೆಯೇ ಎಂದು ಕಾಂಗ್ರೆಸ್ ಸಂಸದ ಕುಲದೀಪ್ ಇಂದೋರಾ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸಚಿವರು ಭಾರತೀಯ ರೈಲ್ವೇಯಲ್ಲಿ ಬಳಸುವ ಕಂಬಳಿ ಹಗುರವಾಗಿದ್ದು ತೊಳೆಯಲು ಸುಲಭ. ಇವುಗಳನ್ನು ಶುಚಿಗೊಳಿಸಲು ಯಾಂತ್ರೀಕೃತ ಲಾಂಡ್ರಿ ವ್ಯವಸ್ಥೆ ಇರುತ್ತದೆ. ಪ್ರಯಾಣಿಕರ ಸುರಕ್ಷತೆ ಕಡೆಗೆ ಗಮನಹರಿಸಲಾಗುತ್ತದೆ ಎಂದಿದ್ದಾರೆ.

ಪ್ರಯಾಣಿಕರು ತಮ್ಮ ದೂರುಗಳನ್ನು ರೈಲ್ವೆ ಆಪ್ ಮೂಲಕ ದಾಖಲಿಸಬಹುದು. ದೂರು ಬಂದರೆ ತಕ್ಷಣವೇ ಅದಕ್ಕೆ ಸ್ಪಂದಿಸುತ್ತೇವೆ. ಹೊದಿಕೆಗಳು, ಬೆಡ್ ರೋಲ್ ಎಲ್ಲವನ್ನೂ ಕಾಲ ಕಾಲಕ್ಕೆ ಸ್ವಚ್ಛಗೊಳಿಸಲಾಗುತ್ತದೆ. ಹಾಗಿದ್ದರೂ ದೂರುಗಳಿದ್ದಲ್ಲಿ ದಾಖಲಿಸಬಹುದು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Ballari: ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು, ಜಿಲ್ಲೆಯತ್ತ ತಲೆಯೂ ಹಾಕದ ಸಚಿವ ಜಮೀರ್ ಅಹ್ಮದ್