Select Your Language

Notifications

webdunia
webdunia
webdunia
webdunia

ಮೋದಿ ಸರ್ಕಾರದ ಒಂದು ದೇಶ ಒಂದೇ ಚಂದಾದಾರಿಕೆ ಯೋಜನೆ: ಇದರಿಂದ ವಿದ್ಯಾರ್ಥಿಗಳಿಗೆ ಹೇಗೆ ಲಾಭವಾಗಲಿದೆ

Narendra Modi

Krishnaveni K

ನವದೆಹಲಿ , ಮಂಗಳವಾರ, 26 ನವೆಂಬರ್ 2024 (10:08 IST)
ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವ ಸಂಪುಟ ಒಂದೇ ದೇಶ, ಒಂದೇ ಚಂದಾದಾರಿಕೆ ಯೋಜನೆಗೆ ಹಸಿರು ನಿಶಾನೆ ತೋರಿದೆ. ಇದರಿಂದ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ ಎನ್ನಲಾಗಿದೆ. ಇದರ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪ್ರಪಂಚದಾದ್ಯಂತ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲು ಅನುಕೂಲವಾಗಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಅಂದಾಜು 6,000 ಕೋಟಿ ರೂ. ವ್ಯಯಿಸಲಿದೆ.  ಈ ಯೋಜನೆಯಿಂದ ವಿದ್ಯಾರ್ಥಿಗಳು ಹೆಚ್ಚು ಅನುಕೂಲ ಪಡೆಯಲಿದ್ದಾರೆ.

ಒಂದು ರಾಷ್ಟ್ರ ಒಂದು ಚಂದಾದಾರಿಕೆಯಲ್ಲಿ 30 ಪ್ರಮುಖ ಅಂತಾರಾಷ್ಟ್ರೀಯ ಜರ್ನಲ್ ಪ್ರಕಾಶಕರನ್ನು ಸೇರಿಸಲಾಗಿದೆ. ಈ ಪ್ರಕಾಶಕರು ಪ್ರಕಟಿಸಿದ ಸುಮಾರು 13,000 ಇ-ಜರ್ನಲ್ ಗಳನ್ನು ಈಗ 6,300 ಕ್ಕೂ ಹೆಚ್ಚು ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಕೇಂದ್ರ ಸರ್ಕಾರದ R&D  ಸಂಸ್ಥೆಗಳು ಬಳಸಿಕೊಳ್ಳಬಹುದಾಗಿದೆ.

ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲು ಜರ್ನಲ್ ಗಳಿಗಾಗಿ ಪ್ರಪಂಚದಾದ್ಯಂತ ಹುಡಕಬೇಕಾಗಿಲ್ಲ. ಬದಲಾಗಿ ಎಲ್ಲವೂ ಒಂದೇ ಕಡೆ ಲಭ್ಯವಾಗಲಿದೆ. ಇನ್ನು, ಅಟಲ್ ಇನ್ನೋವೇಷನ್ ಹೊಸ ಹಂತವನ್ನು ಪ್ರಾರಂಭಿಸಲಾಗುವುದು. ಇದರ ಅಡಿಯಲ್ಲಿ 30 ಹೊಸ ಆವಿಷ್ಕಾರ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ಇದರಿಂದ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳು, ಯುವಕರಿಗೆ ಸಹಾಯವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಕ್ಫ್‌ ಹೆಸರಿನಲ್ಲಿ ದಬ್ಬಾಳಿಕೆ ನಿಲ್ಲದಿದ್ದರೆ ಕರ್ನಾಟಕದಲ್ಲೂ ಕಾಂಗ್ರೆಸ್ ಧೂಳೀಪಟ: ಆರ್‌ ಅಶೋಕ್ ಆಕ್ರೋಶ