ಹಾಸ್ಟೆಲ್ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಹಾಸ್ಟೆಲ್ ಮಾಲೀಕನ ಅಪ್ರಾಪ್ತ ಮಗ

ಸೋಮವಾರ, 13 ಜನವರಿ 2020 (06:09 IST)
ಹೈದರಾಬಾದ್ : ಹಾಸ್ಟೆಲ್ ಯುವತಿಯ ಮೇಲೆ ಹಾಸ್ಟೆಲ್ ಮಾಲೀಕನ ಅಪ್ರಾಪ್ತ ಮಗ ಹಾಗೂ ಆತನ  ಸ್ನೇಹಿತ ಅತ್ಯಾಚಾರ ಎಸಗಿದ ಘಟನೆ ಹೈದರಾಬಾದ್ ನ ಜುಬಿಲಿ ಹಿಲ್ಸ್ ನಲ್ಲಿ ನಡೆದಿದೆ.ಎಲ್ಲಾರೆಡ್ಡಿಗುಡಾದ ಹಾಸ್ಟೆಲ್ ನಲ್ಲಿ ವಾಸವಾಗಿದ್ದ 21 ವರ್ಷದ ಯುವತಿಯನ್ನು ಮಾಲೀಕನ ಅಪ್ರಾಪ್ತ ಮಗ ಹಾಗೂ ಆತನ ಸ್ನೇಹಿತ ಇಬ್ಬರು ಪರಿಚಯಮಾಡಿಕೊಂಡಿದ್ದರು. ಆಕೆಯ ಹಾಸ್ಟೆಲ್ ನಿಂದ ತನ್ನ ಅಕ್ಕನ ಮನೆಗೆ ತೆರಳಿದ್ದಾಗ ಆಕೆಗೆ ಫೋನ್ ಮಾಡಿ ಮನೆಯಲ್ಲಿ ಯಾರು ಇಲ್ಲದಿರುವ ವಿಷಯ ತಿಳಿದ ಮಾಲೀಕನ ಮಗ ಹಾಗೂ ಆತನ ಸ್ನೇಹಿತ ಡ್ರಗ್ಸ್ ತೆಗೆದುಕೊಂಡು ಆಕೆಯ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಅದನ್ನು ವಿಡಿಯೋ ಮಾಡಿಕೊಂಡ ನೀಚರು ಈ ವಿಚಾರ ಯಾರಿಗಾದರೂ ತಿಳಿಸಿದರೆ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.


ಆದರೆ ಸಂತ್ರಸ್ತೆ ಈ ವಿಷಯ ತನ್ನ ಮನೆಯವರಿಗೆ ತಿಳಿಸಿ ಪೊಲೀಸ್ ಠಾಣೆಗೆ ಬಂದು ಅವರಿಬ್ಬರ ವಿರುದ್ಧ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೊಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಜಿಹಾದಿ ಗ್ಯಾಂಗ್ ವಿರುದ್ಧ ಎಫ್ ಐ ಆರ್