Publish Date: Sun, 12 Jan 2020 (22:00 IST)
Updated Date: Sun, 12 Jan 2020 (22:01 IST)
ರಾಜ್ಯದಲ್ಲಿ ನಡೆಯುತ್ತಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧದ ಹೋರಾಟದ ಸಮಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಮುಂದಾಗಿದ್ದ ಜಿಹಾದಿ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.
ಇದೀಗ ಜಿಹಾದಿ ಗ್ಯಾಂಗ್ ವಿರುದ್ಧ ಸಿಸಿಬಿ ಪೊಲೀಸರು ಎಫ್ ಐ ಆರ್ ದಾಖಲು ಮಾಡಿದ್ದಾರೆ.
ಉಗ್ರರನ್ನು ಬಳಕೆ ಮಾಡಿಕೊಂಡು ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಮೆಹಬೂಬ್ ಪಾಷಾ ಎಂಬಾತ ಮಾಸ್ಟರ್ ಮೈಂಡ್ ಆಗಿ ಕೆಲಸ ಮಾಡುತ್ತಿದ್ದ ಅಂತ ಗುರ್ತಿಸಲಾಗಿದೆ.
ಜಿಹಾದಿ ಗ್ಯಾಂಗ್ ಗೆ ಸದಸ್ಯರ ನೇಮಕ, ಶಸ್ತ್ರಾಸ್ತ್ರ ಪೂರೈಕೆ ಮೊದಲಾದ ಕೆಲಸದಲ್ಲಿ ಕೆಲಸದಲ್ಲಿ ಭಾಗಿಯಾದರ ಜಾಡು ಹಿಡಿದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.