Select Your Language

Notifications

webdunia
webdunia
webdunia
webdunia

ಎರಡನೇ ಪತ್ನಿಯ ಕತ್ತು ಕತ್ತರಿಸಿ ಪರಾರಿಯಾದ ಮೊದಲ ಪತ್ನಿ

ಎರಡನೇ ಪತ್ನಿಯ ಕತ್ತು ಕತ್ತರಿಸಿ ಪರಾರಿಯಾದ ಮೊದಲ ಪತ್ನಿ
ಮಡಿಕೇರಿ , ಭಾನುವಾರ, 5 ಜನವರಿ 2020 (11:45 IST)
ಗಂಡನ ಎರಡನೇ ಪತ್ನಿಯನ್ನು ಮೊದಲನೇ ಪತ್ನಿಯೇ ಕೊಲೆ ಮಾಡಿ ಪರಾರಿಯಾಗಿದ್ದಾಳೆ.

ಜಾರ್ಖಂಡ ಮೂಲದ ದಯಾನಂದ ಎಂಬಾತ ಎರಡು ಮದುವೆಯಾಗಿದ್ದ. ಮೊದಲನೇ ಹೆಂಡತಿ ಆಶಿಕಾ ಗುಪ್ತಾ, ಆ ಬಳಿಕ ವಶಿಕಾ ದೇವಿಯನ್ನು ಎರಡನೇ ಮದುವೆ ಮಾಡಿಕೊಂಡಿದ್ದರು.

ಇಬ್ಬರು ಹೆಂಡತಿಯರು ಹಾಗೂ ಮೂವರು ಮಕ್ಕಳೊಂದಿಗೆ ತೋಟದ ಮನೆಯೊಂದರಲ್ಲಿ ದಯಾನಂದ ವಾಸಿಸುತ್ತಿದ್ದನು. ಆದರೆ ಇಬ್ಬರೂ ಪತ್ನಿಯರಲ್ಲಿ ಜಗಳ ಶುರುವಾಗಿದೆ.

ಹೀಗಾಗಿ ಮೊದಲನೇ ಪತ್ನಿ ಆಶಿಕಾ ಗುಪ್ತಾ ತನ್ನ ಗಂಡನ ಎರಡನೇ ಹೆಂಡತಿ ವಶಿಕಾಳನ್ನು ಕತ್ತಿಯಿಂದ ಕತ್ತು ಕತ್ತರಿಸಿ ಕೊಲೆ ಮಾಡಿದ್ದಾಳೆ.

ಕೊಡಗಿನ ಅರೆಕಾಡುದಲ್ಲಿ ಘಟನೆ ನಡೆದಿದ್ದು, ಪರಾರಿಯಾಗಿರೋ ಆಶಿಕಾಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ಸಿಎಎ ವಿರೋಧಿಸುವ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಸದಾನಂದಗೌಡ