ಹೈದರಾಬಾದ್: ಟಿಜಿಎಸ್‌ಆರ್‌ಟಿಸಿ ಬಸ್ ಮತ್ತು ಜಲ್ಲಿಕಲ್ಲು ತುಂಬಿದ ಟ್ರಕ್ ನಡುವೆ ಡಿಕ್ಕಿ ಸಂಭವಿಸಿದ ಭೀಕರ ಅಪಘಾತದಲ್ಲಿ 20 ಜನರು ಸಾವನ್ನಪ್ಪಿ, ಹಲವು ಮಂದಿ ಗಂಭೀರ ಗಾಯಗೊಂಡ ಹೃದಯ ವಿದ್ರಾಹಕ ಘಟನೆ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಖಾನಾಪುರ ಗೇಟ್ ಬಳಿ ನಡೆದಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಹರಿದಾಡುತ್ತಿದ್ದು, ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದವರ ಸಂಕಷ್ಟ ಕರುಳು ಹಿಂಡುವಂತಿದೆ.
ಸೈಟ್‌ನ ವೀಡಿಯೊವು ರಸ್ತೆಗೆ ಅಡ್ಡಲಾಗಿ ಉರುಳಿದ ಬಸ್ ಅನ್ನು ತೋರಿಸುತ್ತದೆ, ಗಾಯಗೊಂಡ ಪ್ರಯಾಣಿಕರು ಸಹಾಯಕ್ಕಾಗಿ ಅಳುತ್ತಿರುವುದನ್ನು ಕಾಣಬಹುದು.
ಬಸ್ಸಿನೊಳಗೆ ಸಿಲುಕಿದ್ದ ಹಲವಾರು ಪ್ರಯಾಣಿಕರನ್ನು ಸಮೀಪದ ನಿವಾಸಿಗಳು ಕೂಡಲೇ ರಕ್ಷಿಸಿದ್ದಾರೆ.
ಚೇವೆಲ್ಲಾ ಎಸಿಪಿ ಬಿ ಕಿಶನ್ ಪ್ರಕಾರ, ಆರ್ ಟಿಸಿ ಬಸ್ ತಾಂಡೂರಿನಿಂದ ಹೊರಟು ಚೇವೆಲ್ಲಾ ಕಡೆಗೆ ಹೋಗುತ್ತಿತ್ತು.
ಅಪಘಾತ ಸಂಭವಿಸಿದಾಗ ಟ್ರಕ್ ಸರಿಯಾದ ಲೇನ್‌ನಲ್ಲಿತ್ತು ಎಂದು ರಾಜೇಂದ್ರನಗರ ಡಿಸಿಪಿ ಯೋಗೇಶ್ ಗೌತಮ್ ಹೇಳಿದ್ದಾರೆ.
ಅಪಘಾತದ ವೇಳೆ ಬಸ್‌ನಲ್ಲಿ 40 ಮಂದಿ ಪ್ರಯಾಣಿಕರಿದ್ದರು. ಡಿಕ್ಕಿಯ ನಂತರ ಲಾರಿಯಲ್ಲಿದ್ದ ಜಲ್ಲಿಕಲ್ಲು ಲೋಡ್ ಪ್ರಯಾಣಿಕರ ಮೇಲೆ ಬಿದ್ದಿದ್ದು, ಪರಿಸ್ಥಿತಿ ಹದಗೆಟ್ಟಿದೆ.