Select Your Language

Notifications

webdunia
webdunia
webdunia
webdunia

Andhrapradesh Temple Stampede: ಈ ಅಂಶಗಳು ಶ್ರೀಕಾಕುಳಂ ಕಾಲ್ತುಳಿತಕ್ಕೆ ಕಾರಣವಾಯಿತೇ

Srikakulam Stamped

Sampriya

ನವದೆಹಲಿ , ಶನಿವಾರ, 1 ನವೆಂಬರ್ 2025 (19:50 IST)
Photo Credit X
webdunia
Photo Credit X
ನವದೆಹಲಿ: ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಸಂಭವಿಸಿದ ಕಾಳ್ತುಳಿತದಲ್ಲಿ ಕನಿಷ್ಠ 9 ಜನರು ಸಾವನ್ನಪ್ಪಿ, ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಶೇಷ ದಿನವಾದ ಏಕಾದಶಿಯನ್ನು ಆಚರಿಸಲು ಭಕ್ತರು ದೇವಾಲಯಕ್ಕೆ ಧಾವಿಸಿದ್ದರಿಂದ ನಿರೀಕ್ಷೆಗೂ ಮೀರಿದ ಜನ ಸೇರಿತರ್ತು. 

ಭಕ್ತರು ಏಕಾಏಕಿ ಒಳನುಗ್ಗಿದ್ದರಿಂದ ಹಲವರು ಕುಸಿದು ಬಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನೂ ಈ ಕೆಲ ಅಂಶಗಳು ಈ ದುರ್ಘಟನೆಗೆ ಪ್ರಮುಖ ಕಾರಣವಾಗಿತ್ತು. 

ದೇವಾಲಯದ ಪ್ರವೇಶ ಮತ್ತು ನಿರ್ಗಮನ ಎರಡೂ ಒಂದೇ ಸ್ಥಳದಲ್ಲಿದ್ದರಿಂದ ಅವ್ಯವಸ್ಥೆ ಮತ್ತು ಜನದಟ್ಟಣೆಗೆ ಕಾರಣವಾಯಿತು.
    ಘಟನೆ ಸಂಭವಿಸಿದ ದೇವಸ್ಥಾನವು ಖಾಸಗಿಯಾಗಿ ನಿರ್ವಹಿಸಲ್ಪಟ್ಟಿದೆ ಮತ್ತು ರಾಜ್ಯ ದತ್ತಿ ಇಲಾಖೆ ಅಡಿಯಲ್ಲಿ ನೋಂದಣಿಯಾಗಿಲ್ಲ.
    ಕಾರ್ಯಕ್ರಮದ ಆಯೋಜಕರು ಯಾವುದೇ ಅಧಿಕೃತ ಅನುಮೋದನೆಯನ್ನು ಪಡೆದಿಲ್ಲ ಮತ್ತು ಕೂಟದ ಬಗ್ಗೆ ರಾಜ್ಯ ಸರ್ಕಾರಕ್ಕೆ ತಿಳಿಸಲಾಗಿಲ್ಲ.
    ಕಾಲ್ತುಳಿತದ ಸಮಯದಲ್ಲಿ ಯಾತ್ರಿಕರು ಸೇರುವ ಪ್ರದೇಶವು ಇನ್ನೂ ನಿರ್ಮಾಣ ಹಂತದಲ್ಲಿದೆ
    ಗಾಯಗೊಂಡ ಭಕ್ತರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಘಟನೆಯ ನಂತರ ಕೆಲವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
   

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆ ಶಿವಕುಮಾರ್‌ಗೆ ಮುಖ್ಯಮಂತ್ರಿಗಾದಿ ಕುರಿತು ಸಿದ್ದು ಆಪ್ತ ಭೈರತಿ ಸುರೇಶ್ ಸ್ಫೋಟಕ ಹೇಳಿಕೆ