Select Your Language

Notifications

webdunia
webdunia
webdunia
webdunia

ನಿರ್ಭಯಾ ಅತ್ಯಾಚಾರ ಆರೋಪಿಗಳ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಗೃಹಸಚಿವಾಲಯ

ನಿರ್ಭಯಾ ಅತ್ಯಾಚಾರ ಆರೋಪಿಗಳ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಗೃಹಸಚಿವಾಲಯ
ನವದೆಹಲಿ , ಶುಕ್ರವಾರ, 6 ಡಿಸೆಂಬರ್ 2019 (16:02 IST)
ನವದೆಹಲಿ: ಹೈದರಾಬಾದ್ ನಲ್ಲಿ ಪಶುವೈದ್ಯೆಯ ಮೇಲೆ ಅತ್ಯಾಚಾರ ಮಾಡಿದ ನಾಲ್ವರು ಆರೋಪಿಗಳು ಎನ್ ಕೌಂಟರ್ ಆದ ಬೆನ್ನಲ್ಲೇ 2012 ರಲ್ಲಿ ದೆಹಲಿಯಲ್ಲಿ ನಡೆದಿದ್ದ ಅಂತಹದ್ದೇ ಪೈಶಾಚಿಕ ಕೃತ್ಯವೆಸಗಿದವರ ಗಲ್ಲು ಶಿಕ್ಷೆ ಖಾಯಂಗೊಳಿಸಲು ಕೇಂದ್ರ ಗೃಹಸಚಿವಾಲಯ ಶಿಫಾರಸ್ಸು ಮಾಡಿದೆ.


2012 ರ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯ ವಿರುದ್ಧವಾಗಿ ಕ್ಷಮಾದಾನ ನೀಡುವಂತೆ ಆರೋಪಿಗಳು ಮನವಿ ಮಾಡಿದ್ದರು. ಆದರೆ ಕ್ಷಮಾದಾನ ನೀಡದಂತೆ ಈ ಮೊದಲು ದೆಹಲಿ ಸರ್ಕಾರ ರಾಷ್ಟ್ರಪತಿಗಳಿಗೆ ಮನವಿ ಮಾಡಿತ್ತು.

ಇದೀಗ ಕೇಂದ್ರ ಗೃಹ ಸಚಿವಾಲಯವೂ ನಿರ್ಭಯಾ ರೇಪಿಸ್ಟ್ ಗಳ ಕ್ಷಮಾದಾನ ಅರ್ಜಿ ತಿರಸ್ಕರಿಸಿ ಗಲ್ಲು ಶಿಕ್ಷೆ ಖಾಯಂಗೊಳಿಸಲು ಶಿಫಾರಸ್ಸು ಮಾಡಿದೆ. ಇದರಿಂದಾಗಿ ರಾಷ್ಟ್ರಪತಿಗಳು ಕ್ಷಮಾದಾನ ನೀಡುವ ಸಂಭವ ಕ್ಷೀಣವಾಗಿದೆ. ಅದೂ ಅಲ್ಲದೆ, ಇಂತಹ ಆರೋಪಿಗಳಿಗೆ ವಿನಾಯ್ತಿ ನೀಡಬಾರದು ಎಂದು ಸ್ವತಃ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರೇ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ನಿರ್ಭಯಾ ಆರೋಪಿಗಳಿಗೆ ಗಲ್ಲು ಖಾಯಂ ಆದಂತಾಗಿದೆ. ಎಲ್ಲವೂ ಸರಿ ಹೋದರೆ ಈ ತಿಂಗಳೇ ಕಾಮುಕರಿಗೆ ಗಲ್ಲು ಶಿಕ್ಷೆ ಜಾರಿಯಾಗುವ ಸಾಧ್ಯತೆಯಿದೆ. ಇವೆರಡೂ ಘಟನೆಗಳೂ ಅತ್ಯಾಚಾರಿಗಳಿಗೆ ತಕ್ಕ ಪಾಠವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೈದರಾಬಾದ್ ಅತ್ಯಾಚಾರ ಆರೋಪಿಗಳ ಎನ್ ಕೌಂಟರ್ ಗೆ ನಿಜ ಕಾರಣ ಬಯಲು ಮಾಡಿದ ಪೊಲೀಸರು