Select Your Language

Notifications

webdunia
webdunia
webdunia
webdunia

ಹೈದರಾಬಾದ್ ಅತ್ಯಾಚಾರ ಆರೋಪಿಗಳ ಎನ್ ಕೌಂಟರ್ ಗೆ ನಿಜ ಕಾರಣ ಬಯಲು ಮಾಡಿದ ಪೊಲೀಸರು

ಹೈದರಾಬಾದ್ ಅತ್ಯಾಚಾರ ಆರೋಪಿಗಳ ಎನ್ ಕೌಂಟರ್ ಗೆ ನಿಜ ಕಾರಣ ಬಯಲು ಮಾಡಿದ ಪೊಲೀಸರು
ಹೈದರಾಬಾದ್ , ಶುಕ್ರವಾರ, 6 ಡಿಸೆಂಬರ್ 2019 (15:47 IST)
ಹೈದರಾಬಾದ್: ಪಶು ವೈದ್ಯೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಗಳನ್ನು ಎನ್ ಕೌಂಟರ್ ಮಾಡಿದ್ದರ ಹಿಂದಿನ ನಿಜ ಕಾರಣವನ್ನು ಸೈಬರಾಬಾದ್ ಪೊಲೀಸ್ ಮುಖ್ಯಸ್ಥ ವಿಸಿ ಸಜ್ಜನರ್ ಬಹಿರಂಗಪಡಿಸಿದ್ದಾರೆ.


ಆರೋಪಿಗಳ ಮೇಲೆ ಪೊಲೀಸರು ನಕಲಿ ಎನ್ ಕೌಂಟರ್ ಮಾಡಿರಬಹುದೇ ಎಂಬಿತ್ಯಾದಿ ಅನುಮಾನಗಳು ಓಡಾಡುತ್ತಿರುವ ಹಿನ್ನಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಪೊಲೀಸರು ಘಟನೆಯ ವೃತ್ತಾಂತ ಬಯಲು ಮಾಡಿದ್ದಾರೆ.

ಪ್ರಕರಣದ ಮರುಸೈಷ್ಟಿಗೆ ಆರೋಪಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾಗ ಆರೋಪಿಗಳಲ್ಲಿ ಇಬ್ಬರು ಪೊಲೀಸರಿಂದ ಗನ್ ಕಿತ್ತುಕೊಂಡು ದಾಳಿಗೆ ಯತ್ನಿಸಿದ್ದರು. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಗುಂಡು ಹಾರಿಸಬೇಕಾಯಿತು. ಘಟನೆಯಲ್ಲಿ ಇಬ್ಬರು ಪೊಲೀಸರಿಗೂ ಗಾಯವಾಗಿದೆ. ಅವರಿಗೆ ಶರಣಾಗಲು ಎಚ್ಚರಿಕೆ ನೀಡಿದ್ದೆವು. ಆದರೆ ಅವರು ನಮ್ಮ ಮಾತು ಕೇಳದಾಗ ಬೇರೆ ದಾರಿ ಕಾಣದೇ ಗುಂಡು ಹಾರಿಸಬೇಕಾಯಿತು ಎಂದು ಪೊಲೀಸ್ ಕಮಿಷನರ್ ಸಜ್ಜನರ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಿಶಾ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ಎನ್ ಕೌಂಟರ್; ಕಣ್ಣೀರಿಟ್ಟ ಆರೋಪಿ ಚೆನ್ನಕೇಶವುಲು ಪತ್ನಿ