Select Your Language

Notifications

webdunia
webdunia
webdunia
webdunia

ಪವಿತ್ರ ರಂಜಾನ್ ಮಾಸ ಇಂದಿನಿಂದ: ಪ್ರಧಾನಿ ಮೋದಿಯಿಂದ ಮುಸ್ಲಿಮರಿಗೆ ಶುಭಾಶಯ

ಪವಿತ್ರ ರಂಜಾನ್ ಮಾಸ ಇಂದಿನಿಂದ: ಪ್ರಧಾನಿ ಮೋದಿಯಿಂದ ಮುಸ್ಲಿಮರಿಗೆ ಶುಭಾಶಯ

Sampriya

ನವದೆಹಲಿ , ಭಾನುವಾರ, 2 ಮಾರ್ಚ್ 2025 (10:26 IST)
Photo Courtesy X
ನವದೆಹಲಿ:  ‌‌ಪ್ರಧಾನಿ ನರೇಂದ್ರ ಮೋದಿ ಅವರು ನಾಡಿನ ಎಲ್ಲ ಮುಸ್ಲಿಂ ಬಾಂಧವರಿಗೆ ರಂಜಾನ್ ಶುಭಾಶಯಗಳನ್ನು ತಿಳಿಸಿದ್ದಾರೆ.

X ನಲ್ಲಿನ ಪೋಸ್ಟ್‌ನಲ್ಲಿ ಮೋದಿ ಅವರು ಬರೆದುಕೊಂಡು, "ರಂಜಾನ್ ಆಶೀರ್ವಾದದ ತಿಂಗಳು ಪ್ರಾರಂಭವಾಗುತ್ತಿದ್ದಂತೆ, ಅದು ನಮ್ಮ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ತರಲಿ. ಈ ಪವಿತ್ರ ಮಾಸವು ಪ್ರತಿಬಿಂಬ, ಕೃತಜ್ಞತೆ ಮತ್ತು ಭಕ್ತಿಯನ್ನು ಪ್ರತಿಬಿಂಬಿಸುತ್ತದೆ, ಸಹಾನುಭೂತಿ, ದಯೆ ಮತ್ತು ಸೇವೆಯ ಮೌಲ್ಯಗಳನ್ನು ನಮಗೆ ನೆನಪಿಸುತ್ತದೆ. ರಂಜಾನ್ ಮುಬಾರಕ್ ಎಂದು ಬರೆದುಕೊಂಡಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶನಿವಾರ ರಾತ್ರಿ ಎಲ್ಲರಿಗೂ ರಂಜಾನ್ ಶುಭಾಶಯಗಳನ್ನು ತಿಳಿಸಿದ್ದಾರೆ.

"ರಂಜಾನ್ ಮುಬಾರಕ್! ಈ ಪವಿತ್ರ ತಿಂಗಳು ನಿಮ್ಮ ಜೀವನದಲ್ಲಿ ಸಂತೋಷವನ್ನು ತುಂಬಲಿ ಮತ್ತು ನಿಮ್ಮ ಹೃದಯಕ್ಕೆ ಶಾಂತಿಯನ್ನು ತರಲಿ" ಎಂದು ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಿಯಾಂಕಾ ಗಾಂಧಿ X ನಲ್ಲಿ, "ನಿಮ್ಮೆಲ್ಲರಿಗೂ ಕರುಣೆ ಮತ್ತು ಆಶೀರ್ವಾದದ ಪವಿತ್ರ ತಿಂಗಳು ರಂಜಾನ್ ಹೃತ್ಪೂರ್ವಕ ಅಭಿನಂದನೆಗಳು. ಈ ಪವಿತ್ರ ತಿಂಗಳು ನಿಮ್ಮೆಲ್ಲರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ತರಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ" ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜತೆ ಗುರುತಿಸಿಕೊಂಡಿದ್ದ ಕೈ ಕಾರ್ಯಕರ್ತೆಯ ಶವ ಸೂಟ್‌ಕೇಸ್‌ನಲ್ಲಿ ಪತ್ತೆ