Select Your Language

Notifications

webdunia
webdunia
webdunia
webdunia

ಭೂಕುಸಿತ ಪರಿಹಾರ ಪ್ಯಾಕೇಜ್‌ ಷರತ್ತಿನಿಂದ ಅನ್ಯಾಯವಾಗಿದೆ: ಪ್ರಿಯಾಂಕಾ ಗಾಂಧಿ

Wayanad landslide Victims, Prime Minister Narendra Modi, MP Priyanka Gandhi Vadra

Sampriya

ನವದೆಹಲಿ , ಸೋಮವಾರ, 24 ಫೆಬ್ರವರಿ 2025 (20:39 IST)
Photo Courtesy X
ನವದೆಹಲಿ: ವಯನಾಡ್‌ ಭೂಕುಸಿತ ಸಂತ್ರಸ್ತರಿಗೆ ಬಿಡುಗಡೆ ಮಾಡಿರುವ ಪರಿಹಾರ ಪ್ಯಾಕೇಜ್‌ ಅನ್ನು ಅನುದಾನವಾಗಿ ಪರಿವರ್ತಿಸುವಂತೆ ಒತ್ತಾಯಿಸಿ ಪ್ರಧಾನಿ ಮೋದಿಗೆ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು  ಪತ್ರ ಬರೆದಿದ್ದಾರೆ.

ಜುಲೈ 30, 2024 ರಂದು, ವಯನಾಡ್‌ನ ಚೂರಲ್‌ಮಲಾ, ಮುಂಡಕ್ಕೈ ಮತ್ತು ಪುಂಚಿರಿ ಮಟ್ಟಂ ಗ್ರಾಮಗಳಲ್ಲಿ ಸರಣಿ ಭೂಕುಸಿತಗಳು ಸಂಭವಿಸಿ ಅಪಾರ ಪ್ರಾಣ ಹಾನಿ, ಆಸ್ತಿ ಹಾನಿ ಸಂಭವಿಸಿತ್ತು. ಈ ದುರಂತವು 250 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿತು, ಇನ್ನೂ 200 ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

ಕಳೆದ ವಾರ, ಕೇಂದ್ರ ಸರ್ಕಾರವು 50 ವರ್ಷಗಳ ಕಾಲ ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು ಅಡಿಯಲ್ಲಿ ಬಡ್ಡಿರಹಿತ ಸಾಲವಾಗಿ ಕೇರಳಕ್ಕೆ ₹529.50 ಕೋಟಿ ಸಹಾಯವನ್ನು ಮಂಜೂರು ಮಾಡಿದೆ. ಪುನರ್ವಸತಿ ವೆಚ್ಚವನ್ನು ಭರಿಸಲು ಕೇರಳ ಸರ್ಕಾರವು ವಿಶೇಷ ಹಣಕಾಸು ಪ್ಯಾಕೇಜ್ ಅನ್ನು ಕೋರಿದ ತಿಂಗಳ ನಂತರ ಅನುಮೋದನೆ ದೊರೆತಿದೆ, ಆರಂಭದಲ್ಲಿ ₹2,262 ಕೋಟಿ ಎಂದು ಅಂದಾಜಿಸಲಾಗಿದೆ. ಕೇಂದ್ರವು ಈ ಹಿಂದೆ ವಯನಾಡ್ ಭೂಕುಸಿತವನ್ನು "ತೀವ್ರ ಪ್ರಕೃತಿಯ ವಿಪತ್ತು ಎಂದು ವರ್ಗೀಕರಿಸಿತ್ತು.

ಕೇರಳದ ಸಂಸದರ ನಿರಂತರ ಒತ್ತಾಯದ ನಂತರ, ಕೇಂದ್ರ ಸರ್ಕಾರ ಇತ್ತೀಚೆಗೆ ವಿನಾಶದ ಸಂತ್ರಸ್ತರಿಗೆ ₹529.50ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿತು. ಆದರೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವಾಗ ಷರತ್ತುಗಳಿಂದ ಸಂತ್ರಸ್ತರಿಗೆ ಅನ್ಯಾಯವಾಗಿದೆ ಎಂದು ಸಂಸದರು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಯುರೋಪ್‌ನ ಜನಸಂಖ್ಯೆಗಿಂತ ಹೆಚ್ಚಿನ ಜನರು ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ: ಮೋದಿ