ಸೌರಾಷ್ಟ್ರ: ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್ ನಲ್ಲಿ ಭಾರೀ ಮಳೆಯಾಗುತ್ತಿದೆ. ಗುಜರಾತ್‌ನಲ್ಲಿ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ನಂತರ ಈಗ ಮಧ್ಯ ಗುಜರಾತ್‌ನಲ್ಲಿ ಭಾರೀ ಮಳೆಯಾಗುತ್ತಿದೆ.
ಧಾರಾಕಾರ ಮಳೆಯಿಂದಾಗಿ ಎಲ್ಲಾ ಜಲಾಶಯಗಳು ನೀರಿನಿಂದ ತುಂಬಿವೆ. ಭಾರೀ ಮಳೆಯಿಂದಾಗಿ ನಗರ ಜಲಾವೃತವಾಗಿದೆ. ಹದಿಮೂರೂವರೆ ಇಂಚು ಮಳೆಯಿಂದಾಗಿ ವಿಶ್ವಾಮಿತ್ರಿ ನದಿ ಅಪಾಯದ ಮಟ್ಟ ದಾಟಿದೆ. ಹೀಗಾಗಿ ಇದೀಗ ನದಿಯಲ್ಲಿರುವ ಮೊಸಳೆಗಳು ಮನೆಗೆ ನುಗ್ಗುವ ಭೀತಿಯೂ ಜನರನ್ನು ಕಾಡಲಾರಂಭಿಸಿದೆ. ನಗರಕ್ಕೆ ಪ್ರವಾಹದ ನೀರು ನುಗ್ಗಲಾರಂಭಿಸಿದೆ. ಸದ್ಯ ವಿಶ್ವಾಮಿತ್ರಿ ನದಿಯ ಮಟ್ಟ 27.85 ಅಡಿ ತಲುಪಿದೆ.
ಭಾರೀ ಮಳೆಯಿಂದಾಗಿ ಇಂದು ವಡೋದರಾದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮೇಲ್ಮಟ್ಟದ ನದಿಯಿಂದ ವಿಶ್ವಾಮಿತ್ರ ನದಿಗೆ ನೀರು ಬಿಟ್ಟಿದ್ದರಿಂದ ನದಿಗೆ ನೀರು ನುಗ್ಗಿದೆ. ಅಕೋಟಾ ಗ್ರಾಮದ ದೇವನಗರ ಕೊಳೆಗೇರಿಯಿಂದ 20 ಜನರನ್ನು ರಕ್ಷಿಸಲಾಗಿದೆ. ಜಿಐಡಿಸಿ ಅಗ್ನಿಶಾಮಕ ಠಾಣೆ ತಂಡ ಅಕೋಟಾ ಗ್ರಾಮದ 50 ಕೊಳೆಗೇರಿಗಳಿಗೆ ನೀರು ನುಗ್ಗಿದೆ. ವಾಹನಗಳು ನೀರಿನಲ್ಲಿ ತೇಲುತ್ತಿದ್ದು, ಪ್ರವಾಹದಲ್ಲಿ ಜನರು ದಿಕ್ಕೇ ತೋಚದಂತಾಗಿದ್ದಾರೆ.
ವಿಶ್ವಾಮಿತ್ರಿ ನದಿಯ ನೀರಿನ ಮಟ್ಟ ಹೆಚ್ಚಳದಿಂದ ಮೊಸಳೆಗಳು ಹೊರಬರುತ್ತಿವೆ. ಫತೇಗಂಜ್ ನರಹರಿ ಆಸ್ಪತ್ರೆಯ ಹೊರಗೆ ಮೊಸಳೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ರಾತ್ರಿ 2 ಗಂಟೆ ಸಮಯದಲ್ಲಿ ಮೊಸಳೆಯೊಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಮೊಸಳೆಯನ್ನು ಕಂಡು ಜನರಲ್ಲಿ ಭಯ ಆವರಿಸಿದೆ. ಮೊಸಳೆಯನ್ನು ರಕ್ಷಿಸಿ ಮತ್ತೆ ನದಿಗೆ ಬಿಡಲಾಯಿತು.ಒಟ್ಟಿನಲ್ಲಿ ಗುಜರಾತ್ ನಲ್ಲಿ ಈಗ ಅಕ್ಷರಶಃ ಪ್ರವಾಹ ಸದೃಶ ವಾತಾವರಣವಿದೆ.