Select Your Language

Notifications

webdunia
webdunia
webdunia
webdunia

ಪೇಟ ಧರಿಸಿದ್ದಕ್ಕೆ ದಲಿತ ಯುವಕನಿಗೆ ಏನ್ಮಾಡಿರ್ದು ಗೊತ್ತಾ

Dalit Youth Attacked

Sampriya

ಅಹಮದಾಬಾದ್ , ಶನಿವಾರ, 20 ಜುಲೈ 2024 (19:45 IST)
Photo Courtesy X
ಅಹಮದಾಬಾದ್: ಸನ್‌ಗ್ಲಾಸ್ ಹಾಕಿಕೊಂಡು ತಲೆಗೆ ಪೇಟ ಹಾಕಿಕೊಂಡು ಫೋಟೋಗೆ ಪೋಸ್ ನೀಡಿದ ದಲಿತ ಯುವಕನ ಮೇಲೆ ಮೇಲ್ವರ್ಗದ  ನಾಲ್ವರು ಹಲ್ಲೆ ನಡೆಸಿರುವ ಘಟನೆ ಗುಜರಾತ್‌ನ ಸಬರಕಾಂತ್ ಜಿಲ್ಲೆಯ ಸಾಯಿಬಾಪುರ್‌ನಲ್ಲಿ ನಡೆದಿದೆ.

ಹಲ್ಲೆಗೊಳಗಾದ ಯುವಕನನನ್ನು ಅಜಯ್ ಎಂದು ಗುರುತಿಸಲಾಗಿದೆ. ಜು 18ರಂದು ಸನ್‌ಗ್ಲಾಸ್‌ ಹಾಕಿಕೊಂಡು ತಲೆಗೆ ಪೇಟೆ ಧರಿಸಿದ್ದ  ಫೋಟೋವನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಇದನ್ನು ನೋಡಿದ ಮೇಲ್ವರ್ಗದ ನಾಲ್ವರು ಅದೇ ದಿನ ರಸ್ತೆಯೊಂದರಲ್ಲಿ ಅಜಯ್‌ರನ್ನು ಅಡ್ಡಗಟ್ಟಿ ಫೋಟೋ ಡಿಲೀಟ್ ಮಾಡುವಂತೆ ಬೆದರಿಕೆ ಹಾಕಿದ್ದಾರೆ.  

ಈ ಬಗ್ಗೆ ಯುವಕ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಡಿಕೇರಿ: ಪತ್ನಿಯನ್ನು ಹತ್ಯೆ ಮಾಡಿ ಪೊಲೀಸರಿಗೆ ಶರಣಾದ ಪತಿ