Select Your Language

Notifications

webdunia
webdunia
webdunia
webdunia

ಜಾಕ್ಸ್ ಶತಕ: ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಸಿಬಿ ಅಮೋಘ ಜಯ

Indian Premier League

Sampriya

ಬೆಂಗಳೂರು , ಭಾನುವಾರ, 28 ಏಪ್ರಿಲ್ 2024 (19:24 IST)
Photo Courtesy X
ಬೆಂಗಳೂರು:  ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ 9 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.

ವಿಲ್ ಜಾಕ್ಸ್ ಅಮೋಘ ಶತಕ (100) ಹಾಗೂ ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ (70) ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು ಗುಜರಾತ್ ಟೈಟನ್ಸ್ ವಿರುದ್ಧ ಜಯ ಗಳಿಸುವ ಮೂಲಕ ಪ್ಲೇ ಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಟಾಸ್ ಗೆದ್ದ ಆರ್‌ಸಿಬಿ ತಂಡ ಬೌಲಿಂಗ್ ಆಯ್ದುಕೊಂಡು ಗುಜರಾತ್ ಟೈಟನ್ಸ್ ಅನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.

ಗುಜರಾತ್ ಟೈಟನ್ಸ್‌ ತಂಡವು 20 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಆರ್‌ಸಿಬಿಗೆ 200ರ ಗೆಲುವಿನ ಗುರಿಯನ್ನು ನೀಡಿತು. ಇದನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ 16 ಓವರ್‌ಗಳಲ್ಲಿ 200 ರನ್ ಬೆನ್ನಟ್ಟಿ ತನ್ನ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಗೆಲುವಿಗೆ ಒಂದು ರನ್ ಬೇಕಾಗಿದ್ದಾಗ ಸಿಕ್ಸರ್ ಗಳಿಸಿದ ಜಾಕ್ಸ್, ಶತಕ ಗಳಿಸುವುದರೊಂದಿಗೆ ಆರ್‌ಸಿಬಿ ಗೆಲುವಿನ ದಡ ಸೇರಿತು. ಇದು ಐಪಿಎಲ್‌ನಲ್ಲಿ ಜಾಕ್ಸ್ ಗಳಿಸಿದ ಚೊಚ್ಚಲ ಶತಕವಾಗಿದೆ. ಈ ಜಯ ಆರ್‌ಸಿಬಿ ಅಭಿಮಾನಿಗಳಗೆ ಹೊಸ ಹುಮ್ಮಸ್ಸನ್ನು ತಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಟುಂಬದ ಜತೆ 'ವಿದ್ಯಾರ್ಥಿ ಭವನ'ದ ದೋಸೆ ಸವಿದ ಕ್ರಿಕೆಟಿಗ ಅನಿಲ್ ಕುಂಬ್ಳೆ