Select Your Language

Notifications

webdunia
webdunia
webdunia
webdunia

ಐಪಿಎಲ್‌ನಲ್ಲಿ ರಾಹುಲ್‌ ಹೊಸ ದಾಖಲೆ: ರನ್‌ ಮಿಷಿನ್‌ ಕೊಹ್ಲಿಯನ್ನು ಹಿಂದಿಕ್ಕಿದ ಕನ್ನಡಿಗ

K L Rahul

Sampriya

ಮುಂಬೈ , ಭಾನುವಾರ, 28 ಏಪ್ರಿಲ್ 2024 (11:27 IST)
Photo Courtesy X
ಮುಂಬೈ:  ಐಪಿಎಲ್‌ನ 44ನೇ ಪಂದ್ಯದಲ್ಲಿ ನಾಯಕ ಕೆ.ಎಲ್‌. ರಾಹುಲ್‌ ಅವರ ಅರ್ಧಶತಕದ ಹೊರತಾಗಿಯೂ ಲಖನೌ ಸೂಪರ್ ಜೈಂಟ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್‌ಗಳಿಂದ ಸೋತಿದೆ. ಲಖನೌನ ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಶನಿವಾರ ಕನ್ನಡಿಗ ರಾಹುಲ್‌ ಹೊಸ ದಾಖಲೆ ಬರೆದರು.

ಐಪಿಎಲ್‌ ಟೂರ್ನಿಯಲ್ಲಿ ಉತ್ತಮ ಲಯದಲ್ಲಿರುವ ರಾಹುಲ್‌ ತಂಡಕ್ಕೆ ಬ್ಯಾಟಿಂಗ್‌ ವಿಭಾಗದಲ್ಲಿ ಶಕ್ತಿಯಾಗಿದ್ದಾರೆ. ಆರಂಭಿಕ ಆಟಗಾರನಾಗಿ ಐಪಿಎಲ್‌ನಲ್ಲಿ ವೇಗವಾಗಿ 4000 ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಅವರು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಸ್ಫೋಟಕ 76 ರನ್‌ ಗಳಿಸಿದ್ದರು.

2018ರಿಂದ ಐಪಿಎಲ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ರಾಹುಲ್‌ ಈವರೆಗೆ ಆಡಿರುವ 94 ಇನ್ನಿಂಗ್ಸ್‌ಗಳಲ್ಲಿ 4000 ರನ್‌ ಶಿಖರವನ್ನು ತಲುಪಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕೆರಿಬಿಯನ್‌ ಕ್ರಿಕೆಟಿಗ ಕ್ರಿಸ್‌ ಗೇಲ್‌ ಹೆಸರಿನಲ್ಲಿತ್ತು. ಗೇಲ್‌ 112 ಇನ್ನಿಂಗ್ಸ್‌ಗಳಲ್ಲಿ 4 ಸಾವಿರ ರನ್‌ ಪೂರೈಸಿದ್ದರು. ಉಳಿದಂತೆ ಡೇವಿಡ್‌ ವಾರ್ನರ್‌ (112), ಆರ್‌ಸಿಬಿ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ (128), ಎಬಿ ಡಿವಿಲಿಯರ್ಸ್ (131) ನಂತರದ ಸ್ಥಾನದಲ್ಲಿದ್ದಾರೆ.

ರಾಹುಲ್ ಅವರ ಬ್ಯಾಕ್-ಟು-ಬ್ಯಾಕ್ ಅರ್ಧಶತಕಗಳು ಅವರನ್ನು ಐಪಿಎಲ್ 2024 ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮೂರನೇ ಶ್ರೇಯಾಂಕಕ್ಕೆ ಬಡ್ತಿ ನೀಡಿತು. ಅವರು  9 ಪಂದ್ಯಗಳಲ್ಲಿ 378 ರನ್ ಗಳಿಸಿದ್ದಾರೆ. ಆರ್‌ಸಿಬಿಯ ವಿರಾಟ್ ಕೊಹ್ಲಿ 430 ರನ್‌ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್‌ 385 ರನ್‌ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಭಾರತದ ಟಿ20 ವಿಶ್ವಕಪ್ ತಂಡವನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.  ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಗೆ ಯಾರಿಗೆಲ್ಲ ಮಣೆ ಹಾಕುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರೆಂಜ್ ಕ್ಯಾಪ್‌ ರೇಸ್‌: ವಿರಾಟ್ ಕೊಹ್ಲಿಗೆ ರುತುರಾಜ್, ಪಂತ್ ಪೈಪೋಟಿ