Webdunia - Bharat's app for daily news and videos

Install App

ಸೊಸೆ ಸರ್ಕಾರೀ ಕೆಲಸ ಕೊಡಿಸಿ ಸ್ವಾಮೀ: ಚಿತ್ರದುರ್ಗ ಡಿಸಿ ಮುಂದೆ ರೇಣುಕಾಸ್ವಾಮಿ ತಂದೆ ಬೇಡಿಕೆ

Krishnaveni K
ಗುರುವಾರ, 25 ಜುಲೈ 2024 (14:32 IST)
ಚಿತ್ರದುರ್ಗ: ನನ್ನ ಮಗ ಕೊಲೆಯಾದ ಬಳಿಕ ನಮ್ಮ ಮನೆಗಿದ್ದ ಏಕೈಕ ಆಧಾರವೂ ಇಲ್ಲದಾಗಿದೆ. ನನ್ನ ಸೊಸೆಗೆ ಸರ್ಕಾರೀ ನೌಕರಿ ಕೊಡಿಸಿ ಎಂದು ದರ್ಶನ್ ಆಂಡ್ ಗ್ಯಾಂಗ್ ನಿಂದ ಹತ್ಯೆಯಾದ ರೇಣುಕಾಸ್ವಾಮಿ ತಂದೆ ಚಿತ್ರದುರ್ಗ ಡಿಸಿಗೆ ಮನವಿ ಮಾಡಿದ್ದಾರೆ.

ಇಂದು ಚಿತ್ರದುರ್ಗ ಡಿಸಿ ವೆಂಕಟೇಶ್ ಅವರನ್ನು ಭೇಟಿಯಾದ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಮತ್ತು ಪತ್ನಿ ಸಹನಾ ಸರ್ಕಾರೀ ನೌಕರಿ ಕೊಡಿಸುವಂತೆ ಮನವಿ ಮಾಡಿದ್ದಾರೆ. ಈ  ಮೊದಲು ಕಾಶೀನಾಥಯ್ಯ ನೇರವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅನುಕಂಪದ ಆಧಾರದಲ್ಲಿ ಸರ್ಕಾರೀ ನೌಕರಿ ಕೊಡಿಸಲು ಮನವಿ ಮಾಡಿದ್ದರು. ಈ ವೇಳೆ ಸಿಎಂ ಕೂಡಾ ನೌಕರಿ ಕೊಡಿಸುವುದಾಗಿ ಭರವಸೆ ನೀಡಿದ್ದರು.

ಆದರೆ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರೀ ನೌಕರಿ ಕೊಡಿಸುವುದರ ಬಗ್ಗೆಭಾರೀ ಟೀಕೆ ಕೇಳಿಬಂದಿತ್ತು. ರೇಣುಕಾಸ್ವಾಮಿ ದೇಶ ಸೇವೆ ಮಾಡಿ ಸಾಯಲಿಲ್ಲ. ಆತ ಹತ್ಯೆಯಾಗಿರುವುದಕ್ಕೆ ಕುಟುಂಬದ ಬಗ್ಗೆ ಸಂತಾಪವಿದೆ. ಆದರೆ ಆತ ಕೂಡಾ ಅಮಾಯಕನೇನಲ್ಲ. ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ. ಅಂತಹ ವ್ಯಕ್ತಿಯನ್ನು ಕೊಲೆ ಮಾಡಿರುವುದು ತಪ್ಪಿರಬಹುದು. ಆದರೆ ಅದಕ್ಕಾಗಿ ಸರ್ಕಾರೀ ನೌಕರಿ ಕೊಡುವುದು ಯಾಕೆ? ಇದರ ಬದಲು ದೇಶಕ್ಕಾಗಿ ಪ್ರಾಣ ಕಳೆದುಕೊಂಡ ಇಲ್ಲವೇ ಬೇರೆ ಎಷ್ಟೋ ಕಾರಣಗಳಿಗೆ ಸಾವನ್ನಪ್ಪಿರುವ ಕುಟುಂಬಗಳಿಗೆ ಸಹಾಯ ಮಾಡಿ. ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸರ್ಕಾರೀ ನೌಕರಿ ಕೊಟ್ಟರೆ ತಪ್ಪು ಸಂದೇಶ ಕೊಟ್ಟಂತಾಗುತ್ತದೆ. ಬೇಕಿದ್ದರೆ ಅವರಿಗೆ ಧನ ಸಹಾಯ ಮಾಡಲಿ ಸಾಕು ಎಂದು ಸಾರ್ವಜನಿಕರಿಂದ ಅಭಿಪ್ರಾಯ ಕೇಳಿಬಂದಿತ್ತು.

ಸಿಎಂಗೇ ಮನವಿ ಮಾಡಿದ್ದರೂ ಇದುವರೆಗೆ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರೀ ನೌಕರಿ ಸಿಕ್ಕಿರಲಿಲ್ಲ. ಆಶ್ವಾಸನೆಯಾಗಿಯೇ ಉಳಿದಿತ್ತು. ಈ ಹಿನ್ನಲೆಯಲ್ಲಿ ಇಂದು ರೇಣುಕಾಸ್ವಾಮಿ ತಂದೆ ಚಿತ್ರದುರ್ಗ ಡಿಸಿಯನ್ನು ಭೇಟಿ ಮಾಡಿ ತಮ್ಮ ಮನವಿ ಸಲ್ಲಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೆಟ್ರೊ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್‌ನ್ಯೂಸ್‌: ಮೆಟ್ರೊ ಮಾರ್ಗಗಳಲ್ಲಿ ಸಿಗಲಿದೆ ವೈಫೈ

ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರತಿ ಮನೆಗೆ ಉಚಿತ ವಿದ್ಯುತ್ ಘೋಷಿಸಿದ ಬಿಹಾರ ಸಿಎಂ ನಿತೀಶ್‌

ಭಾರೀ ಮಳೆಗೆ ದಕ್ಷಿಣ ಕನ್ನಡದ ಹಲವೆಡೆ ಭೂಕುಸಿತ: ಬೆಂಗಳೂರು–ಮಂಗಳೂರು ಹೆದ್ದಾರಿ ಸಂಪರ್ಕ ಕಡಿತ

ರಸ್ತೆ ನಿರ್ಮಿಸಲು ಮೋದಿಗೆ ಪತ್ರ ಬರೆದ ಬಾಲಕಿ: ಕಾಂಗ್ರೆಸ್ ಕೈಲಿ ಅದೂ ಆಗಲ್ವಾ ಎಂದು ಬಿಜೆಪಿ ಟೀಕೆ

ವಿರಾಟ್ ಕೊಹ್ಲಿ ವಿಡಿಯೋ ತೋರಿಸಿ ಚಿನ್ನಸ್ವಾಮಿ ದುರಂತಕ್ಕೆ ಆರ್ ಸಿಬಿಯೇ ಕಾರಣ ಎಂದ ಸರ್ಕಾರ

ಮುಂದಿನ ಸುದ್ದಿ
Show comments