Select Your Language

Notifications

webdunia
webdunia
webdunia
webdunia

ನಕಲಿ ದಾಖಲೆ ನೀಡಿ ಸಿಕ್ಕಿಬಿದ್ದಿದ್ದ ಯುವಕ ಮೌಂಟ್‌ ಎವರೆಸ್ಟ್‌ ಏರಿ ಅಸಲಿ ಸಾಧನೆ!

ನಕಲಿ ದಾಖಲೆ ನೀಡಿ ಸಿಕ್ಕಿಬಿದ್ದಿದ್ದ ಯುವಕ ಮೌಂಟ್‌ ಎವರೆಸ್ಟ್‌ ಏರಿ ಅಸಲಿ ಸಾಧನೆ!
bengaluru , ಶನಿವಾರ, 4 ಜೂನ್ 2022 (18:46 IST)
ಡಿಜಿಟಲ್‌ ತಂತ್ರಜ್ಞಾನ ಬಳಸಿ ತಾನು ವಿಶ್ವದ ಅತೀ ಎತ್ತರದ ಮೌಂಟ್‌ ಎವರೆಸ್ಟ್‌ ಏರಿದ್ದೇನೆ ಎಂದು ನಕಲಿ ದಾಖಲೆ ನೀಡಿ ನಿಷೇಧಕ್ಕೆ ಒಳಗಾಗಿದ್ದ ಯುವಕನೊಬ್ಬ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಲು ನಿಜವಾಗಿಯೂ ಮೌಂಟ್‌ ಎವರೆಸ್ಟ್‌ ಏರಿ ಸಾಧನೆ ಮಾಡಿ ಗಮನ ಸೆಳೆದಿದ್ದಾನೆ.
ಹೌದು, ಭಾರತದ ನರೇಂದ್ರ ಸಿಂಗ್ ಎಂಬ ಯುವಕ, ನಾನು ಮೌಂಟ್‌ ಎವರೆಸ್ಟ್‌ ಏರಿದ್ದೇನೆ ಎಂದು ಪ್ರಮಾಣಪತ್ರವನ್ನು ಪ್ರದರ್ಶಿಸಿದ್ದ. ಆದರೆ ಪರಿಶೀಲನೆ ಮಾಡಿದಾಗ ಈ ಪ್ರಮಾಣಪತ್ರ ನಕಲಿ ಆಗಿದ್ದು, ಡಿಜಿಟಲ್‌ ತಂತ್ರಜ್ಞಾನ ಬಳಸಿ ತಿದ್ದಲಾಗಿದೆ ಎಂದು ಪತ್ತೆ ಹಚ್ಚಿದ ನೇಪಾಳ ಸರಕಾರ ನರೇಂದ್ರ ಅಲ್ಲದೇ ಇನ್ನಿಬ್ಬರ ಮೇಲೆ ೬ ವರ್ಷಗಳ ನಿಷೇಧ ಹೇರಿತ್ತು.
ಇದರಿಂದ ತೀವ್ರ ಮುಜುಗರಕ್ಕೆ ಒಳಗಾದ ನರೇಂದ್ರ ಸಿಂಗ್‌ ನಕಲಿಯನ್ನು ಅಸಲಿ ಮಾಡಿಯೇ ಮಾಡುತ್ತೇನೆ ಎಂದು ಪಣತೊಟ್ಟು 8,849 ಮೀಟರ್ ಎತ್ತರ ಅಂದರೆ 29,032 ಅಡಿ ಎತ್ತರದ ಪರ್ವತವನ್ನು ಏರಲು ತೀರ್ಮಾನಿಸಿದ. ಅದರಂತೆ ೬ ವರ್ಷಗಳ ನಿಷೇಧ ಶಿಕ್ಷೆ ಮುಗಿಯುತ್ತಿದ್ದಂತೆ ನಿಜವಾಗಿಯೂ ಮೌಂಟ್‌ ಎವರೆಸ್ಟ್‌ ಏರಿ ದಾಖಲೆ ಬರೆದಿದ್ದಾನೆ.
ತಮ್ಮ ಸಾಧನೆ ಕುರಿತು ಮಾನಾಡಿರುವ ನರೇಂದ್ರ ಎವರೆಸ್ಟ್ ಎಲ್ಲಿರಿಗೂ ಕನಸ್ಸಾಗಿರುತ್ತದೆ ಆದರೆ, ಅದು ನನ್ನಗೆ ಜೀವ ಎಂದು ಹೇಳಿದ್ದಾರೆ. ನನ್ನ ಮೇಲೆ ಸಾಕಷ್ಟು ಆರೋಪಗಳಿದ್ದವು ಆದ್ದರಿಂದ ನಾನು ಎವರೆಸ್ಟ್ ಹತ್ತಿ ನನ್ನ ಸಾಮರ್ಥ್ಯವನ್ನ ನಿರೂಪಸಿದ್ದೇನೆ ಎಂದು ತಿಳಿಸಿದ್ದಾರೆ.
2020ರಲ್ಲಿ ತೇನ್ಸಿಂಗ್ ನಾರ್ಗೆ ಅಡ್ವೆಂವರ್ ಅವಾರ್ಡ್ಗೆ ನರೇಂದ್ರ ನಾಮನಿರ್ದೇಶನಗೊಂಡಿದೆ. ಆದರೆ ಪ್ರಶಸ್ತಿಯನ್ನು ತಡೆಹಿಡಿಯಲಾಗುತ್ತು ಇದು ನನ್ನಗೆ ಬಹಳ ನೋವನ್ನುಂಟು ಮಾಡಿತ್ತು ಎಂದು ಹೇಳಿದ್ದಾರೆ.
ಅವರ ನಿಷೇಧವು ಮೇ 20ಕ್ಕೆ ಮುಕ್ತಾಯವಾಯಿತ್ತು ನರೇಂದ್ರ ಈ ಭಾರೀ ತಾವು ಸ್ವಯಂ ಶಿಖರವೇರಿದ ಫೋಟೋ ಹಾಗು ಸಾಕಷ್ಟು ಪುರಾವೆಗಳನ್ನು ಪ್ರಸೃತಪಡಿಸಿದ ಕಾರಣ ನಾವು ಅವರಿಗೆ ಪ್ರಮಾಣಪತ್ರವನ್ನ ವಿತರಿಸಿದ್ದೇವೆ ಎಂದು ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿ ಭೀಷ್ಮಾ ರಾಜ್ ಭಟ್ರೈ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಕೊಲ್ಲಲು ಬಿಜೆಪಿ ಯತ್ನ: ರಾಕೇಶ್‌ ಟಿಕಾಯತ್‌ ಗಂಭೀರ ಆರೋಪ