Select Your Language

Notifications

webdunia
webdunia
webdunia
webdunia

ಮಾಸ್ಕ್ ಇಲ್ಲದವರನ್ನು ವಿಮಾನದಿಂದ ಕೆಳಗಿಳಿಸಿ!

ಮಾಸ್ಕ್ ಇಲ್ಲದವರನ್ನು ವಿಮಾನದಿಂದ ಕೆಳಗಿಳಿಸಿ!
ನವದೆಹಲಿ , ಶನಿವಾರ, 4 ಜೂನ್ 2022 (14:32 IST)
ನವದೆಹಲಿ ;  ದೇಶದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಮಾನ ಹಾಗೂ ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್ ಧರಿಸದೇ ಅಥವಾ ಕೈಯನ್ನು ಸ್ಯಾನಿಟೈಸ್ ಮಾಡಿಕೊಳ್ಳದೇ,

ಕೋವಿಡ್ ಮಾರ್ಗದರ್ಶಿಗಳ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ದೆಹಲಿ ಹೈಕೋರ್ಟ್ ಸೂಚಿಸಿದೆ.

ಕೋವಿಡ್ ಮಾರ್ಗದರ್ಶಿಗಳನ್ನು ಉಲ್ಲಂಘಿಸುವವರ ಮೇಲೆ ದಂಡವನ್ನು ವಿಧಿಸಬೇಕು. ಅವರನ್ನು ನೋ-ಫ್ಲೈ ಲಿಸ್ಟ್ನಲ್ಲಿ (ಹಾರಾಟ ನಿರ್ಬಂಧ ಪಟ್ಟಿ) ಸೇರಿಸಬೇಕು. ವಿಮಾನ ನಿಲ್ದಾಣ ಅಥವಾ ವಿಮಾನದೊಳಗೆ ಪ್ರಯಾಣಿಕರು ಮಾಸ್್ಕ ಧರಿಸದೇ ಇದ್ದಲ್ಲಿ ಅವರನ್ನು ದೈಹಿಕವಾಗಿ ಹೊರಹಾಕಿ.

ಕೋವಿಡ್ ಹರಡುವಿಕೆ ತಡೆಗಟ್ಟಲು ನಿಯಮಗಳ ಪಾಲನೆ ಅತ್ಯಂತ ಅಗತ್ಯವಾದದ್ದು ಎಂಬುದನ್ನು ಮನವರಿಕೆ ಮಾಡುವ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲು ವಿಮಾನಯಾನ ನಿಯಂತ್ರಕ ಡಿಜಿಸಿಎಗೆ ನಿರ್ದೇಶಿಸಿದೆ.

ನ್ಯಾಯಾಧೀಶರು ಸ್ಥಳೀಯ ವಿಮಾನದಲ್ಲಿ ಪ್ರಯಾಣ ನಡೆಸುತ್ತಿದ್ದಾಗ, ಇನ್ನಿತರ ಪ್ರಯಾಣಿಕರು ವಿಮಾನ ಹಾಗೂ ವಿಮಾನ ನಿಲ್ದಾಣದಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದನ್ನು ಗಮನಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಾಮಿಯಾ ಮಸೀದಿಯಲ್ಲಿ ದೇವಸ್ಥಾನ ಇದ್ದಿದ್ದು ನಿಜ: ಎಚ್.ಡಿ. ಕುಮಾರಸ್ವಾಮಿ