Select Your Language

Notifications

webdunia
webdunia
webdunia
webdunia

ತನ್ನನ್ನು ತಾನೇ ಮದುವೆ ಆಗಲು ಯುವತಿಗೆ ಬಿಡಲ್ಲ: ಬಿಜೆಪಿ ನಾಯಕಿ

marry temple Hinduism BJP ಮದುವೆ ದೇವಸ್ಥಾನ ಹಿಂದುತ್ವ ಬಿಜೆಪಿ
bengaluru , ಶನಿವಾರ, 4 ಜೂನ್ 2022 (14:35 IST)
ಗುಜರಾತ್‌ ನ ಯುವತಿ ತನ್ನನ್ನು ತಾನೇ ಮದುವೆ ಆಗಲು ಬಿಡಲ್ಲ. ಇದು ಹಿಂದೂ ವಿರೋಧಿ ಎಂದು ಬಿಜೆಪಿಯ ವಡೋದರಾ ನಗರ ಘಟಕದ ಅಧ್ಯಕ್ಷೆ ಸುನೀತಾ ಶುಕ್ಲ ಹೇಳಿದ್ದಾರೆ. ಈ ಮೂಲಕ ಯುವತಿ ಮದುವೆ ವಿಷಯ ರಾಜಕೀಯ ಬಣ್ಣ ಪಡೆದಿದೆ.
24 ವರ್ಷದ ಕ್ಷಮಾ ಬಿಂದು ಎಂಬ ಯುವತಿ ತನ್ನನ್ನು ತಾನೇ ಹಿಂದೂ ಸಂಪ್ರದಾಯದಂತೆ ಮದುವೆ ಆಗುವುದಾಗಿ ಘೋಷಿಸಿದ್ದರು. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.
ಇದರ ಬೆನ್ನಲ್ಲೇ ಹೇಳಿಕೆ ನೀಡಿದ ಬಿಜೆಪಿ ನಗರ ಘಟಕದ ಅಧ್ಯಕ್ಷೆ ಸುನೀತಾ ಶುಕ್ಲಾ, ಒಂದು ವೇಳೆ ಆಕೆ ದೇವಸ್ಥಾನದಲ್ಲಿ ಮದುವೆ ಆಗಲು ಮುಂದಾದರೆ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.
ಬಿಂದು ಮಾನಸಿಕವಾಗಿ ಅಸ್ವಸ್ಥಳಾಗಿದ್ದಾಳೆ. ಹಿಂದೂ ಸಂಪ್ರದಾಯದಂತೆ ಒಂದು ಹುಡುಗಿ ಯುವಕನನ್ನು ಮದುವೆ ಆಗಬೇಕು. ಆಕೆಯೇ ಸ್ವಯಂ ಮದುವೆ ಆಗಲು ಅವಕಾಶವಿಲ್ಲ ಎಂದು ಶುಕ್ಲ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಾಮಿಯಾ ಮಸೀದಿಯಲ್ಲಿ ದೇವಸ್ಥಾನ ಇದ್ದಿದ್ದು ನಿಜ: ಎಚ್.ಡಿ. ಕುಮಾರಸ್ವಾಮಿ