Select Your Language

Notifications

webdunia
webdunia
webdunia
webdunia

ಆಪರೇಷನ್ ಕಮಲ ಭೀತಿ

ಆಪರೇಷನ್ ಕಮಲ ಭೀತಿ
ಜೈಪುರ , ಶನಿವಾರ, 4 ಜೂನ್ 2022 (09:57 IST)
ಜೈಪುರ : ರಾಜಸ್ಥಾನದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ ಶುರುವಾಗಿದೆ.

ರಾಜ್ಯಸಭೆ ಚುನಾವಣೆ ಹಿನ್ನೆಲೆ ರಾಜಸ್ಥಾನದ ಕಾಂಗ್ರೆಸ್ ಅಡ್ಡ ಮತದಾನದ ಭೀತಿಯಿಂದ ತನ್ನ ಶಾಸಕರನ್ನು ಉದಯಪುರದ ಹೋಟೆಲ್ಗೆ ಸ್ಥಳಾಂತರಿಸಲು ನಿರ್ಧರಿಸಿದೆ.

ಜೂನ್ 10 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಮುನ್ನವೇ ಬಿಜೆಪಿ ಆಪರೇಷನ್ ಕಮಲ ಪ್ರಾರಂಭಿಸುತ್ತದೆ ಎಂಬ ಆತಂಕದಿಂದ ರಾಜಸ್ಥಾನದಲ್ಲಿರುವ ತನ್ನ ಶಾಸಕರನ್ನು ಉದಯಪುರದ ಹೋಟೆಲ್ಗೆ ಕಾಂಗ್ರೆಸ್ ಶಿಫ್ಟ್ ಮಾಡಲಿದೆ.

ಜೈಪುರದ ಕ್ಲಾರ್ಕ್ ಹೋಟೆಲ್ನಲ್ಲಿ ನಡೆಯುತ್ತಿರುವ ತರಬೇತಿ ಶಿಬಿರ ಮುಗಿದ ನಂತರ ಗುರುವಾರ ಕಾಂಗ್ರೆಸ್ ತನ್ನ ಶಾಸಕರನ್ನು ಉದಯಪುರದ ಅರಾವಳಿ ರೆಸಾರ್ಟ್ಗೆ ಕರೆದೊಯ್ಯುವ ಸಾಧ್ಯತೆಯಿದೆ.

ಅಲ್ಲದೆ ಪಕ್ಷೇತರ ಶಾಸಕರು ಮತ್ತು ಇತರ ಪಕ್ಷಗಳಿಗೆ ಸೇರಿದವರು ಹಾಗೂ ಆಡಳಿತ ಪಕ್ಷವನ್ನು ಬೆಂಬಲಿಸುವವರನ್ನು ಉದಯಪುರಕ್ಕೆ ಸ್ಥಳಾಂತರಿಸಲಾಗುವುದು ಎಂದು ಮೂಲಗಳು ಹೇಳಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್ !