Select Your Language

Notifications

webdunia
webdunia
webdunia
webdunia

ರೈಲು ನಿಲ್ದಾಣದಲ್ಲಿ ಎಲ್ಲರ ಎದುರೇ ಬಲವಂತವಾಗಿ ಮುತ್ತಿಟ್ಟ

ರೈಲು ನಿಲ್ದಾಣದಲ್ಲಿ ಎಲ್ಲರ ಎದುರೇ ಬಲವಂತವಾಗಿ ಮುತ್ತಿಟ್ಟ

ರಾಮಕೃಷ್ಣ ಪುರಾಣಿಕ

ಬೆಂಗಳೂರು , ಶುಕ್ರವಾರ, 23 ಫೆಬ್ರವರಿ 2018 (20:06 IST)
ಫೆಬ್ರುವರಿ 23: ತುರ್ಬೆ ರೈಲು ನಿಲ್ದಾಣದಲ್ಲಿ ವ್ಯಕ್ತಿಯೊರ್ವ ಮಹಿಳಾ ಪ್ರಯಾಣಿಕರಿಗೆ ಬಲವಂತವಾಗಿ ಮುತ್ತಿಟ್ಟ ಘಟನೆ ಬುಧವಾರದಂದು ನವೀ ಮುಂಬೈನಲ್ಲಿ ನಡೆದಿದೆ. ಅಪರಾಧಿಯನ್ನು ರೈಲ್ವೆ ಪೋಲಿಸರು ಬಂಧಿಸಿದ್ದಾರೆ.
ಸುಮಾರು 20 ವರ್ಷ ವಯಸ್ಸಿನ ಹುಡುಗಿಯು ತುರ್ಬೆ ರೈಲು ನಿಲ್ದಾಣದಲ್ಲಿ ನಗರ ಸಂಚಾರಿ ರೈಲುಗಾಗಿ ಕಾಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
 
ಸುದ್ದಿ ಸಂಸ್ಥೆ ಎಎನ್ಐ ಹಂಚಿದ ಸಿಸಿಟಿವಿ ದೃಶ್ಯವಳಿಯಲ್ಲಿ, ಆರೋಪಿಯು ಹುಡುಗಿಯನ್ನು ಅನುಸರಿಸುತ್ತಿದ್ದ. ನಂತರ, ಅವನು ಅವಳನ್ನು ಎಳೆದು ತಬ್ಬಿಕೊಂಡ ಮತ್ತು ಬಲವಂತವಾಗಿ ಮುತ್ತಿಟ್ಟ. ಹುಡುಗಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅವನನ್ನು ದೂಡುತ್ತಾಳೆ ಮತ್ತು ಆರೋಪಿಯು ಸರ್ವೇಸಮಾನ್ಯನಂತೆ ಘಟನಾ ಸ್ಥಳವನ್ನು ತೊರೆಯುತ್ತಾನೆ.
 
ಸೆಕ್ಷನ್ 354 ಎ ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಯು ಮುಂದುವರೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆಯಲ್ಲಿ ಪೋಷಕರ ಕಲ್ಲು ತೂರಾಟ - ವೈರಲ್ ವೀಡಿಯೋ