Publish Date: Wed, 29 Jul 2020 (21:24 IST)
Updated Date: Wed, 29 Jul 2020 (21:25 IST)
ಕೊರೊನಾಗೆ ಚಿಕಿತ್ಸೆ ನೀಡಬೇಕಾದ ವೈದ್ಯನೇ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.
20 ವರ್ಷದ ಯುವತಿಯೊಬ್ಬಳು ಖಾಸಗಿ ಆಸ್ಪತ್ರೆಯ ಐಸೊಲೇಷನ್ ವಾರ್ಡ್‌ನಲ್ಲಿ ವೈದ್ಯರಿಂದ ಲೈಂಗಿಕ ಕಿರುಕುಳಕ್ಕೊಳಗಾಗಿದ್ದಾಳೆ.
ಯುವತಿ ಹಾಗೂ ವೈದ್ಯ ಇಬ್ಬರೂ ಕರೋನ ವೈರಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಖಾಸಗಿ ಆಸ್ಪತ್ರೆಯ ಒಂದೇ ವಾರ್ಡ್ ನಲ್ಲಿ ಇಬ್ಬರನ್ನೂ ದಾಖಲು ಮಾಡಲಾಗಿತ್ತು.
ವೈದ್ಯ ಹಾಗೂ ಯುವತಿಯನ್ನು ಒಂದೇ ವಾರ್ಡಿನಲ್ಲಿ ಶಿಫ್ಟ್ ಮಾಡಿರೋದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಐಸೋಲೇಷನ್ ವಾರ್ಡಿನಲ್ಲಿಯೇ ಯುವತಿಗೆ ಕೊರನಾ ರೋಗಿಯಾಗಿರುವ ವೈದ್ಯನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ.
ನೋಯ್ಡಾದ ಖಾಸಗಿ ಆಸ್ಪತ್ರೆಯೊಂದರಲ್ಲಿ ಘಟನೆ ನಡೆದಿದ್ದು, ಕಾಮುಕ ವೈದ್ಯನ ವಿರುದ್ಧ ಕೇಸ್ ದಾಖಲಾಗಿದೆ.