Publish Date: Tue, 28 Jul 2020 (19:56 IST)
Updated Date: Wed, 29 Jul 2020 (12:55 IST)
ರಾಜ್ಯದ ಬಿಜೆಪಿ ಶಾಸಕರೊಬ್ಬರಿಗೆ ಕೊರೊನಾ ಸೋಂಕಿತರು ಭಾರೀ ಶಾಕ್ ನೀಡಿದ್ದಾರೆ.
ಮೈಸೂರಿನ ವಿದ್ಯಾರಣ್ಯಪುರಂದಲ್ಲಿ ಘಟನೆ ನಡೆದಿದ್ದು, ಕೊರೊನಾ ಪೀಡಿತರು ಶಾಸಕ ರಾಮದಾಸ್ ರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ವಾಗ್ದಾಳಿ ನಡೆಸಿದರು.
ಕೊರೊನಾ ಸೋಂಕಿತರ ಕುಟುಂಬದವರ ಹತ್ತಿರ ಸಮಸ್ಯೆ, ಕಷ್ಟ ಕೇಳಲು ಶಾಸಕ ರಾಮದಾಸ್ ಹೋಗಿದ್ದಾರೆ.
ಆ ವೇಳೆ, ಮನೆಗಳನ್ನು ಸ್ಯಾನಿಟೈಸ್ ಮಾಡುತ್ತಿಲ್ಲ. ಕಸ ಒಯ್ಯುತ್ತಿಲ್ಲ. ಅಧಿಕಾರಿಗಳು ಯಾರೂ ಸ್ಪಂದನೆ ಮಾಡುತ್ತಿಲ್ಲ ಎಂದು ನೋವು ತೋಡಿಕೊಂಡರು. ಈ ವೇಳೆ ಸೋಂಕಿತರ ಕುಟುಂಬದವರು ಹಾಗೂ ಶಾಸಕರ ಹಿಂಬಾಲಕರ ನಡುವೆ ಮಾತಿಗೆ ಮಾತು ಬೆಳೆಯಿತು. ಆಗ ಅಲ್ಲಿನ ಜನರು ಶಾಸಕ ರಾಮದಾಸ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.